ಮೂಡುಬಿದಿರೆ: ಪ್ರಶಸ್ತಿ ಪಡೆಯುವುದಕ್ಕಾಗಿ ಕೆಲಸ ಮಾಡಬಾರದು. ಸಮಾಜಕ್ಕಾಗಿ, ದೇಶದ ಒಳಿತಿಗಾಗಿ ಕೆಲಸ ಮಾಡಿದಾಗ ಜನ ನಮ್ಮನ್ನು ಗುರುತಿಸುತ್ತಾರೆ ಮತ್ತು ಈ ರೀತಿಯ ಸೇವೆಗೆ ನೀಡುವ ಪ್ರಶಸ್ತಿಗೆ ನಿಜವಾದ ಗೌರವ ಇರುತ್ತದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಡಿ.ಸುರೇಂದ್ರ ಕುಮಾರ್ ಹೇಳಿದರು.
ಮೂಡುಬಿದಿರೆ ಜೈನ್‍ಮಿಲನ್ ವತಿಯಿಂದ ಚೌಟರ ಅರಮನೆಯಲ್ಲಿ ಶನಿವಾರ ಸಂಜೆ ನಡೆದ ಸರಳ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಕನಸು ಕಾಣಿ, ಕನಸನ್ನು ನನಸುಗೊಳಿಸಿ ಎಂದು ಅಬ್ದುಲ್ ಕಲಾಂ ಯಾವಾಗಲು ಹೇಳುತ್ತಿದ್ದಂತೆ ನನಗೂ ಜೈನ್‍ಮಿಲನ್ ಮೂಲಕ ನಮ್ಮ ಸಮಾಜ ಒಟ್ಟಾಗಬೇಕು, ಒಬ್ಬರಿಗೊಬ್ಬರು ಹತ್ತಿರವಾಗಬೇಕೆಂಬ ಕನಸು ಇತ್ತು, ಅದು ನನಸಾಗಿದೆ. ನನ್ನ ಶ್ರಮ ಫಲಿಸಿದೆ ಎಂದರು.

Honour To surendra kumar
ಈ ಪ್ರಶಸ್ತಿಯು ನನ್ನ ಜವಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ನನ್ನ ಕಾರ್ಯಕ್ಷೇತ್ರದಲ್ಲಿ ಜೈನ್‍ಮಿಲನ್ ಬೆಳವಣಿಗೆಗೆ ಹೆಚ್ಚಿನ ಒತ್ತು ನಿಡಿದ್ದೇನೆ. ಇವತ್ತು ಅದು ಬೃಹದಾಕಾರವಾಗಿ ಬೆಳೆಸಿರುವುದು ನನಗೆ ಹೆಮ್ಮೆ ತಂದಿದೆ. ಮೂಡುಬಿದಿರೆ ಜೈನ್‍ಮಿಲನ್‍ನ ಕಾರ್ಯ ಚಟುವಟಿಕೆಗಳು ಶ್ಲಾಘನಾರ್ಹ ಎಂದರು.
ಮೂಡುಬಿದಿರೆ ಜೈನ್‍ಮಿಲನ್ ವತಿಯಿಂದ ಡಿ.ಸುರೇಂದ್ರ ಕುಮಾರ್ ಮತ್ತು ಅನಿತಾ ಸುರೇಂದ್ರ ಕುಮಾರ್ ದಂಪತಿಯನ್ನು ಜೈನ್‍ಮಿಲನ್ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸರ್ವ ಮಂಗಳ ಮಹಿಳಾ ಸಂಘದ ಅಧ್ಯಕ್ಷೆ ಸುಧಾ ಪ್ರಥ್ವಿರಾಜ್, ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್, ಜತೆಕಾರ್ಯದರ್ಶಿ ಉಷಾ ಅಭಿಜಿತ್, ಖಜಾಂಜಿ ದಿವ್ಯಾ ವಿರೇಂದ್ರ ಕುಮಾರ್, ಚೌಟರ ಅರಮನೆಯ ಕುಲದೀಪ್ ಎಂ., ಜೈನ್ ಮಿಲನ್‍ನ ಪ್ರಮುಖರಾದ ಧನಕೀರ್ತಿ ಬಲಿಪ, ಸಂಪತ್ ಸಾಮ್ರಾಜ್ಯ, ಯುವರಾಜ್ ಜೈನ್,ಆನಡ್ಕ ದಿನೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಗುಣಪಾಲ ಹೆಗ್ಡೆ ಅಭಿನಂದನಾ ಮಾತುಗಳನ್ನಾಡಿದರು. ಕಾರ್ಯಕ್ರಮವನ್ನು ಜೈನ್‍ಮಿಲನ್ ಅಧ್ಯಕ್ಷೆ ಶ್ವೇತಾ ಕುಮಾರಿ ಸ್ವಾಗತಿಸಿದರು. ನಿತೇಶ್ ಬಲ್ಲಾಳ್ ವಂದಿಸಿದರು.

By suddi9

Leave a Reply

Your email address will not be published. Required fields are marked *