ಮೂಡುಬಿದಿರೆ : ಇಲ್ಲಿನ ಸಂಪಿಗೆ ಚರ್ಚ್ನ ಸಂತ ಸೆಬೆಸ್ಟಿಯನ್ ವಾಳೆಯ ಸದಸ್ಯರು ಹಿಂದೂ ಕ್ರೈಸ್ತರು ಜತೆಗೂಡಿ ಕ್ರಿಸ್ಮಸ್ ಸೌಹಾರ್ದಕೂಟವನ್ನು ಭಾನುವಾರ ಜೋಯ್ಸ್ ಮೋನೀಸ್ ಅವರ ಮನೆಯಲ್ಲಿ ಆಚರಿಸಿದರು.
ಸಂಪಿಗೆ ಚರ್ಚ್ನ ಧರ್ಮಗುರು ಫಾ/ನೆಲ್ಸನ್ ಒಲಿವೆರಾ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಸಮಾಜಸೇವಕರಾದ ಆನಂದ ಪೂಜಾರಿ, ಫೆಲಿಕ್ಸ್ ಡಿ”ಸೋಜಾ, ಹಾಗೂ ಯಶೋಧ ಅವರನ್ನು ಸನ್ಮಾನಿಸಲಾಯಿತು.
ವಾಳೆಯ ಗುರಿಕಾರ ಜೋನ್ ಫೆರ್ನಾಂಡಿಸ್ ಸ್ವಾಗತಿಸಿದರು. ರಾಬರ್ಟ್ ಡಿ”ಸೋಜಾ ಕಾರ್ಯಕ್ರಮ ನಿರೂಪಿಸಿದರು. ಕ್ಲೀಟ ಡಿ”ಸೋಜಾ ವಂದಿಸಿದರು.

