ಮೂಡುಬಿದಿರೆ: ಇಲ್ಲಿನ ನೆಲ್ಲಿಕಾರು ಗ್ರಾಮ ಪಂಚಾಯತ್‍ನ 2018-19 ರ ಸಾಲಿನ ಮಹಿಳಾ ಗ್ರಾಮ ಸಭೆಯು ಶುಕ್ರವಾರ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಾಂಟ್ರಾಡಿ ಇಲ್ಲಿನ ಸಭಾಂಗಣದಲ್ಲಿ ಜರುಗಿತು.
ಗ್ರಾ.ಪಂ. ಅಧ್ಯಕ್ಷ ಜಯಂತ್ ಹೆಗ್ಡೆ ಅಧ್ಯಕ್ಷತೆ ವಹಿಸಿ, ಮಹಿಳಾ ಗ್ರಾಮ ಸಭೆಯು ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ನಾಯಕತ್ವದ ಗುಣ ಬರಲು ಈ ಸಭೆಯನ್ನು ಆಯೋಜಿಸಿದೆ ಎಂದರು.

Mahila Gramasabhe photo
ನಿತೇಶ್ ಮಾರ್ನಾಡ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು, ಸಮಾಜದಲ್ಲಿನ ಪುರುಷ ಮತ್ತು ಮಹಿಳೆಯರ ಅನಮಾನತೆ ಮತ್ತು ಕಟ್ಟುಪಾಡುಗಳ ಬಗ್ಗೆ ಹಾಗೂ ಭಾರತೀಯ ನಾರಿ ಮತ್ತು ಪಾಶ್ಚಿಮಾತ್ಯ ದೇಶದ ಮಹಿಳೆಯರ ಜೀವನ ಕ್ರಮದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಹೆಣ್ಣು ಅಬಲೆಯಲ್ಲ. ಆಕೆ ಎಲ್ಲಾ ಕ್ಷೇತ್ರದಲ್ಲೂ ಸಾಧಿಸಿ ಸೈ ಎನಿಸಿದವಳು. ಮಾತ್ರವಲ್ಲದೆ, ಪೂಜ್ಯನೀಯಳು ಎಂದು ಹೇಳಿದರು. ಇತ್ತೀಚೆಗೆ ಮಂಗಳೂರಿನಲ್ಲಿ ಯುವತಿಯ ಮೇಲೆ ನಡೆದ ಹೀನ ಕೃತ್ಯವನ್ನು ಅವರು ಇದೇ ಸಂದರ್ಭದಲ್ಲಿ ಖಂಡಿಸಿದರು.
ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತೆಯ ರಾಯಭಾರಿಯಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ ಕಮಲ ಪೂಜಾರ್ತಿ ಡೆಂಜಾರು ಅವರನ್ನು ಪಂಚಾಯತ್ ವತಿಯಿಂದ ಸಮ್ಮಾನಿಸಲಾಯಿತು.
ಬಳಿಕ ಮಾತನಾಡಿದ ಕಮಲ ಪೂಜಾರ್ತಿಯವರು ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ನಿರ್ಮೂಲನೆಯ ಬಗ್ಗೆ ತಿಳಿಸಿದರು.
ಉಪವಲಯ ಅರಣ್ಯಾಧಿಕಾರಿ ಹಸಿರು ವನ ನಿರ್ಮಾಣ, ನೀರಿನ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಕುಶಲಾ, ಸದಸ್ಯರಾದ ಉದಯ, ಹರೀಶ, ಸುನಂದ, ಸಂತೋಷ, ಸರಸ್ವತಿ ನಾಯ್ಕ, ಭಾರತಿ, ಶಶಿಧರ, ಯಶೋಧ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಶೆಟ್ಟಿ ಸ್ವಾಗತಿಸಿ ವಂದಿಸಿದರು. ಕಾರ್ಯದರ್ಶಿ ಶೇಖರ್, ಜಲ ಪ್ರೇರಕಿ ಸುನೀತಾ, ಸಿಬ್ಬಂದಿ ರೇಣುಕಾ ಸಹಕರಿಸಿದರು. ಸಿಬ್ಬಂದಿ ಪ್ರಶಾಂತ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *