ಕೈಕಂಬ;ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ಕೈಕಂಬ ಇದರ ವಾರ್ಷಿಕ ಕ್ರೀಡಾಕೂಟ ಶಾಲಾ ಆವರಣದಲ್ಲಿ ನಡೆಯಿತು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುದೇಶ್ ಕುಮಾರ್ ದ್ವಜಾರೋಹಣ ಮಾಡಿದರು.ಶಾಲಾ ಸಂಚಾಲಕಿ ಪ್ಲೋರೆನ್ಸ್ ಮೆಂಡಿಸ್ ಕ್ರೀಡಾಕೂಟ ಉದ್ಘಾಟಿಸಿದರು. ಸಂಘದ ಉಪಾಧ್ಯಕ್ಷ ಅಹಮದ್ ಕಬೀರ್, ಕೋಶಾಧಿಕಾರಿ ಪ್ರಭಾ ವಾಜ್, ಸಲಹೆಗಾರ ಹೇಮಚಂದ್ರ, ಗೀತಾ, ಪೂರ್ವಾಧ್ಯಕ್ಷ ಅನಂತ ಕೃಷ್ಣ ಕಾಮತ್, ಮುಖ್ಯ ಶಿಕ್ಷಕಿ ಸ್ವರ್ಣಲತಾ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಮಹೇಶ್ ಶೆಟ್ಟಿ ಸ್ವಾಗತಿಸಿದರು. ಅಪೇಕ್ಷ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿದ್ಯಾರ್ಥಿಗಳಿಂದ ಆಕರ್ಷಕ ಕವಾಯತು, ಪಥ ಸಂಚಲನ ನಡೆಯಿತು.
