ಕೈಕಂಬ: ನೃತ್ಯಂ ಕಾಸರಗೋಡು ಕೈಕಂಬ ಶಾಖೆಯ ವಾರ್ಷಿಕೋತ್ಸವ ಶನಿವಾರ ಗಣೇಶ್ ಕಟ್ಟೆ ಕೈಕಂಬದಲ್ಲಿ ನೃತ್ಯ ನಿರ್ದೇಶಕರಾದ ಲತಾ ಶಶಿಧರನ್ ಅವರ ಶಿಷ್ಯವೃಂದದವರಿಂದ ನೃತ್ಯ ವೈವಿಧ್ಯ ನಡೆಯಿತು.
ಹಾಡುಗಾರಿಕೆಯಲ್ಲಿ ವಿದ್ವಾನ್ ಟಿ.ಎಂ ಅವನೀಂದ್ರ,ಕೊಳಲುವಾದನದಲ್ಲಿ ವಿದ್ವಾನ್ ಸುರೇಂದ್ರ ಆಚಾರ್ಯ, ಮೃದಂಗದಲ್ಲಿ ವಿದ್ವಾನ್ ಶ್ರೀದರ್ ರೈ, ವಾಯೊಲಿನ್ ವಿದ್ವಾನ್ ನಟರಾಜ್ ಕಲ್ಲುರಾಯ ಸಹಕರಿಸಿದರು.













