ಪೊಳಲಿ:ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇದರ ವತಿಯಿಂದ ತೃತೀಯ ವರ್ಷದ “ಅಹೋರಾತ್ರಿ ಏಕಾಹಾ ಭಜನಾಮಹೋತ್ಸವ”ಕ್ಕೆ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ಶನಿವಾರ ಚಾಲನೆ ನೀಡಿದರು.
ಈಸಂದರ್ಭದಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳದ ಅರ್ಚಕ ಕೆ.ರಾಮ್ ಭಟ್,ಅಖಿಲೇಶ್ವರ ದೇವಳದ ಅರ್ಚಕ ವಾಸುದೇವ ಭಟ್,ವಿಷ್ಣುಮೂರ್ತಿ ಭಟ್, ಮುರಳಿ ಪೊಳಲಿ ಮತ್ತಿತರರು ಉಪಸ್ಥಿತರಿದ್ದರು. ಸೂರ್ಯೋದಯದಿಂದ ಮರುದಿನ ಭಾನುವಾರ ಸೂರ್ಯೋದಯದವರೆಗೆ ನಾನಾ ಭಜನಾಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ.
