ಮೂಡುಬಿದಿರೆ : ಮಂಗಳೂರು ಎಪಿಎಂಸಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಿರ್ತಾಡಿ ಗ್ರಾ.ಪಂನ ಸದಸ್ಯ ಪ್ರವೀಣ್ ಜೈನ್ ಅವರನ್ನು ಬುಧವಾರ ಪಂಚಾಯತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಲತಾ ಹೆಗ್ಡೆ, ಉಪಾಧ್ಯಕ್ಷ ರಾಜೇಶ್ ಸುವರ್ಣ ಮತ್ತು ಸರ್ವ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೋನು, ಕಾರ್ಯದರ್ಶಿ ರವಿ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.
