ಮಂಗಳೂರು: ಜಮ್ಮುಕಾಶ್ಮೀರದಲ್ಲಿ ಉಂಟಾಗಿದ್ದ ಜಳಪ್ರಳಯಕ್ಕೆ ಸಿಲುಕಿದ್ದ ಮಂಗಳೂರಿನ ನಿವಾಸಿ ಮಾಜಿ ಲಯನ್ಸ್ ಗವರ್ನರ್ ಕುಟುಂಬ ಸುರಕ್ಷಿತವಾಗಿ ದೆಹಲಿಗೆ ತಲುಪಿದ್ದು, ನಾಳೆ ಮಂಗಳೂರಿಗೆ ಆಗಮಿಸಲಿದ್ದಾರೆ. ಇವರ ಕುಟುಂಬ ನಾಪತ್ತೆಯಾದಂದಿನಿಂದ ಜಿಲ್ಲೆ ಭಾರೀ ಆತಂಕಕ್ಕೆ ಒಳಗಾಗಿತ್ತು.
ಜೆ.ಕೆ ರಾವ್ ಕುಟುಂಬದಲ್ಲಿ ಅವರ ಪತ್ನಿ ಲತಾ ಮಲ್ಲಿಕಾ ರಾವ್, ಸಂಬಂಧಿಕರಾದ ರಮಾನಂದ ರಾವ್, ಸೌಮಿನಿ ರಾವ್, ವೀಕ್ಷಿತಾ ರಾವ್, ಅನಿಲ್ ರಾವ್, ರಾಜಶ್ರೀ ರಾವ್ ಇದ್ದರು.

jk rao

RAO
ಜಿಲ್ಲಾಧಿಕಾರಿ ಎಬಿ ಇಬ್ರಾಹಿಂ, ಕೇಂದ್ರ ರೈಲ್ವೆ ಸಚಿವ ಸದಾನಂದ ಗೌಡ, ರಾಜ್ಯ ಆರೋಗ್ಯ ಸಚಿವ ಯುಟಿ ಖಾದರ್ ರಕ್ಷಣಾ ಇಲಾಖೆಯ ನೇರ ಸಂಪರ್ಕದಲ್ಲಿದ್ದರು.
ಇವರ ಕುಟುಂಬ ಆ30ರಿಂದ ದೆಹಲಿಗೆ ತಲುಪಿ ಆ.31ರಂದು ಕಾಶ್ಮೀರದ ಲಡಾಕ್ ಪ್ರಾಂತ್ಯಕ್ಕೆ ತೆರಳಿದ್ದರು. ಅಲ್ಲಿ ಕಾಶ್ಮೀರದ ಕಣಿವೆಯಲ್ಲಿ ಸುತ್ತಾಡಿ, ಸೆ.6ರ ನಂತರ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ.
ಜೆ.ಕೆ ರಾವ್ ಅವರ ಏಳು ಜನರ ಕುಟುಂಬವನ್ನು ರಕ್ಷಾ ಪಡೆ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿ ದೆಹಲಿಗೆ ತಲುಪಿಸಿದ್ದಾರೆಂದು ಮೂಲಗಳು ತಿಳಿಸಿವೆ

By suddi9

Leave a Reply

Your email address will not be published. Required fields are marked *