ಸುದ್ದಿಹಳೆಯಂಗಡಿ: ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿ ಸಮೀಪದ ಪಾವಂಜೆ ಸೇತುವೆಯಿಂದ ನಂದಿನಿ ನದಿಗೆ ಹಾರಿ ತಾಯಿ ಮತ್ತು ಮಗುವೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾತ್ರಿ 8 ಗಂಟೆಗೆ ನಡೆದಿದೆ. ಮಗು ಧೀರಜ್ ಜೋಯಿಸ ಸಾವನ್ನಪ್ಪಿದ್ದು ತಾಯಿ ಶಿರ್ವ ಮಂಚಕಲ್ಲು ನಿವಾಸಿ ಗೀತಾ ಯಾನೇ ದಿವ್ಯ ಜೋಯಿ ,ಗೀತ ಯಾನೇ ದಿವ್ಯ ಜೋಯಿಸ ಎಂಬವರು ಶಿರ್ವ ಮಂಚಕಲ್ಲು ನಿವಾಸಿ ಮದುವೆಯಾಗಿ ಹತ್ತು ವರ್ಷಗಳಾಗಿದ್ದು ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯವನು ದೀಪಕ್ ಜೋಯಿಸ ಮತ್ತು ಇನ್ನೊಬ್ಬ ದೀರಜ್ ಜೋಯಿಸ. ಕಳೆದ ವರ್ಷಗಳಲ್ಲಿ ಗಂಡನ ಅಣ್ಣ ರಮಾನಾಥ ಜೋಯಿಸ ಹಾಗೂ ಅತ್ತಿಗೆ ಮಾಲತಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿರುವ ಗೀತಾ ಪ್ರತೀ ಬಾರಿ ಇವರನ್ನು ಕ್ಷುಲ್ಲಕ ಕಾರಣಕ್ಕೆ ಹೀಯಾಳಿಸುತ್ತಿದ್ದರು ಎಂದು ಹೇಳಿದ್ದಾರೆ. ಇದರಿಂದ ಬೇಸತ್ತ ಈಕೆ ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂದು
ಬೆಳಿಗ್ಗೆಯಿಂದಲೇ ಶಿರ್ವದಿಂದ ಮಗು ದೀರಜ್ ನನ್ನು ಕರೆದುಕೊಂಡು ಹೆದ್ದಾರಿಯಲ್ಲೇ ನಡೆದುಕೊಂಡು ಬಂದ ಈಕೆ ಹಳೆಯಂಗಡಿಯಲ್ಲಿ ಸ್ಥಳಿಯರ ಹತ್ತಿರ ಇಲ್ಲಿ ಹೋಟೇಲು ಎಲ್ಲಿ ಕೇಳಿದ್ದಾಳೆ ಹಾಗೆಯೇ ಅಲ್ಲಿಂದ ಮುಂದಕ್ಕೆ ಬಂದು ಪಾವಂಜೆ ದೇವಸ್ಥಾನದ ಬಳಿಯಲ್ಲಿರುವ ಅಂಗಡಿಯಲ್ಲಿ ನೀರು ಕುಡಿದಿದ್ದಾಳೆ . ಅಲ್ಲಿಂದ ಮುಂದಕ್ಕೆ ನಡೆದುಕೊಂಡು ಬಂದು ಪಾವಂಜೆ ನಂದಿನಿ ನದಿಗೆ ಹಾರಿಯೇ ಬಿಟ್ಟಳು. ಕೂಡಲೇ ನೋಡಿದ ಸ್ಥಳೀಯ ರಾಜೇಶ, ಪ್ರವೀಣ, ಸುನಿಲ್, ಸೂರ್ಯ ಕಾಂಚನ್ ಆಕೆಯನ್ನು ಬಚಾವು ಮಾಡಿದ್ದು ಮಗು ಧೀರಜ್ ಮಾತ್ರ ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿ . ಆದರೂ ಛಲ ಬಿಡದೆ ಸ್ಥಳೀಯರು ಮಗುವನ್ನು ಪತ್ತೆ ಮಾಡುವ ಯತ್ನ ಮಾಡುತ್ತಲೇ ಇದ್ದರು. ಸುಮಾರು ಒಂದು ಗಂಟೆ ನಂತರ ಸ್ಥಳೀಯರಾದ ಮುಕ್ಕ ನಿವಾಸಿ ರಾಜಿಕ್ ಮತ್ತು ರಿಜ್ವಾನ್ ಎಂಬವರಿಗೆ ಮಗು ದೀರಜ್ ಅರೆಪ್ರಜ್ಞಾವಸ್ಥೆಯಲ್ಲಿ ನಂದಿನಿ ನದಿಯ ಕಿಂಡಿ ಆಣೇಕಟ್ಟಿನ ಸಮೀಪ ದೊರೆತಿದ್ದು ತಮ್ಮ ಬೈಕಿನಲ್ಲಿ ಕೂಡಲೇ ಮುಕ್ಕ ಆಸ್ಪತ್ರೆಗೆ ದಾಖಲು ಮಾಡಿದರೂ ಅಷ್ಟೊತ್ತಿಗಾಗಲೇ ಮಗುವಿನ ಪ್ರಾಣ ಹೋಗಿತ್ತು. ಈ ನಡುವೆ ಗೀತಾ ಕಾಣೆಯಾದ ಬಗ್ಗೆ ಶಿರ್ವದಲ್ಲಿ ಆಕೆಯ ಗಂಡ ಕಾರ್ಕಳದವರೆಗೆ ಹೋಗಿ ಹುಡುಕಾಟ ನಡೆಸುತ್ತಿದ್ದು ಪಾವಂಜೆಯಲ್ಲಿ ನಡೆದ ದುರ್ಘಟನೆ ಕಿವಿಗೆ ಬಿದ್ದ ಕೂಡಲೇ ಮುಕ್ಕ ಆಸ್ಪತ್ರೆಗೆ ದಾವಿಸಿ ಬಂದಿದ್ದಾರೆ.ಇವರ ಸಂಸಾರ ಕಲಹದ ಬಗ್ಗೆ ಶಿರ್ವ ಠಾಣೆಯಲ್ಲೂ ಈ ಹಿಂದೆ ದೂರು ದಾಖಲಾಗಿದೆ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಸ್ಥಳೀಯರ ಆಕ್ರೋಶ
ಗೀತಾ ಜೋಯಿಸ ಮನೆಯಿಂದ ಹೊರಡುವಾಗ ತನ್ನ ಹಿರಿಯ ಪುತ್ರ ಶಾಲೆ ಹೋಗುತ್ತಿದ್ದ ದೀಪಕ್ ಜೋಯಿಸ(9)ನನ್ನು ತನ್ನೊಂದಿಗೆ ಬರುವಂತೆ ಒತ್ತಾಯಿಸಿದ್ದು ಆತ ನಿರಾಕರಿಸಿದ ಕಾರಣದಿಂದ ಬದುಕುಳಿದ ಎಂದು ತಾಯಿಯೇ ಹೇಳಿದ್ದಾಳೆ. ಈ ನಡುವೆ ಆಸ್ಪತ್ರೆಯಲ್ಲಿ ಜೀವನ್ಮರಣದಲ್ಲಿ ಹೋರಾಡುತ್ತಿದ್ದ ಮಗುವನ್ನು ನೋಡಲು ಯುವಕರ ದಂಡೇ ಸೇರಿತ್ತು.

h-2

h1

h3

h5

By suddi9

Leave a Reply

Your email address will not be published. Required fields are marked *