ಬಂಟ್ವಾಳ: ಬಂಟ್ವಾಳ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ಡಿ.4 ರಂದು ಮಂಗಳವಾರ ಬೆಳಿಗ್ಗೆ 10.30 ಕ್ಕೆ ಜಮಾಬಂಧಿ ಕಾರ್ಯಕ್ರಮ ನಡೆಯಲಿದೆ ಎಂದು ತಾ.ಪಂ.ನ ಪ್ರಕಟನೆ ತಿಳಿಸಿದೆ.
ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ ಗಳ ಪರಿಣಾಮಕಾರಿ ಅನುಷ್ಠಾನ, ಸರಕಾರಿ ಕಾರ್ಯಕ್ರಮ ಗಳ ಲ್ಲಿ ಜನರು ಭಾಗವಹಿಸುವುದರ ಬಗ್ಗೆ ಖಚಿತ ಪಡಿಸಿಕೊಳ್ಳುವ ಮತ್ತು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ, ಪಾರದರ್ಶಕ ತೆಯನ್ನು ಒದಗಿಸುವ ಹಾಗೂ ನಾಗರಿಕರಿಗೆ ಸರಿಯಾದ ಸಮಯದಲ್ಲಿ ಯೋಜನೆ ಗಳ ಮಾಹಿತಿ ದೊರಕುವಂತೆ ಮಾಡುವುದು, ಸಾರ್ವಜನಿಕ ರ ಕುಂದುಕೊರತೆಗಳನ್ನು ಪರಿಹಾರ ನೀಡುವ ಮತ್ತು ತಾಲೂಕು ಪಂಚಾಯತ್ ನ ಸ್ಪಂದನ ಶೀಲ ಆಡಳಿತ ವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 2017-18 ರ ಸಾಲಿನ ತಾ.ಪಂ.ಹಾಗೂ ವಿವಿಧ ಇಲಾಖೆ ಗಳ ಜಮಾ- ಖರ್ಚಿನ ಬಗ್ಗೆ ಸಾರ್ವಜನಿಕ ರ ಸಮ್ಮುಖದಲ್ಲಿ ಜಮಾಬಂಧಿಯನ್ನು ನಡೆಸಲಿದ್ದಾರೆ.
ಉಪಕಾರ್ಯದರ್ಶಿ ಹಾಗೂ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅದ್ಯಕ್ಷೆ ಧನಲಕ್ಮೀ ಸಿ.ಬಂಗೇರ ಹಾಗೂ ತಾ.ಪಂ.ಸದಸ್ಯ ರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿರುವರು.
