ಸುದ್ದಿ9ಬಂಟ್ವಾಳ: ಒಂದು ಮಹಿಳೆ ಆರೋಗ್ಯವಂತಳಾದರೆ ಒಂದು ಮನೆ ಅರೋಗ್ಯವಂತವಾದಂತೆ ಹಾಗಾಗಿ ಅರೋಗ್ಯವಂತ ಸಮಾಜ ನಿಮರ್ಾಣಕ್ಕೆ ಮಹಿಳೆಯರ ಪಾತ್ರ ಹೆಚ್ಚು ಬೇಕು ಎಂದು ಜಿ.ಪಂ.ಸದಸ್ಯ ಎಂ.ಎಸ್. ಮಹಮ್ಮದ್ ತಿಳಿಸಿದರು.
ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ದಿ ಯೋಜನೆ ವಿಟ್ಲ ಹಾಗೂ ಮಂಚಿ ಗ್ರಾ.ಪಂ. ಇದರ ಆಶ್ರಯದಲ್ಲಿ ವಿಶ್ವ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ಮಂಚಿ ಗ್ರಾ.ಪಂ.ನಲ್ಲಿ ಉದ್ಘಾಟಿಸಿ ಮಾತನಾಡಿದರು.
ಪೌಷ್ಟಿಕ ಆಹಾರವನ್ನು ಮಹಿಳಯರು ದಿನ ನಿತ್ಯ ಸೇವಿಸುವ ಯೋಜನೆಯನ್ನು ರೂಪಿಸಿದಾಗ ಇಂತಹ ಕಾರ್ಯಕ್ರಮಗಳು ಹೆಚ್ಚು ಅರ್ಥಪೂರ್ಣವಾದಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಚಿ ಗ್ರಾ.ಪಂ.ಅಧ್ಯಕ್ಷ ಶ್ರೀಪತಿ ರಾವ್ ವಹಿಸಿದ್ದರು. ವೇದಿಕಯಲ್ಲಿ ಗ್ರಾ.ಪಂ ಸದಸ್ಯರಾದ ಇಬ್ರಾಹಿಂ, ಪ್ರತಿಮಾ, ಲಲಿತಾ,ಬದ್ರುದ್ದೀನ್, ವಿಟ್ಲ ಶಿಶು ಅಭಿವೃದ್ದಿ ಯೋಜನಾಧಿಕಾರಿ ಸುಧಾ ಜೋಶಿ, ಮಂಚಿ ವೈದ್ಯಾಧಿಕಾರಿ ಭವ್ಯಾ, ಮಂಚಿ ಪ್ರೌಡಶಾಲಾ ಮುಖ್ಯೋಪಾಧ್ಯಾಯ ಶಿವಕುಮಾರ್, ಜನ ಶ್ರೀ ಟ್ರಸ್ಟನ ಸಂಯೋಜಕಿ ರಾಜೇಶ್ವರಿ ಉಪಸ್ಥಿತರಿದ್ದರು.
ಮೇಲ್ವಿಚಾರಕಿ ಗುಣವತಿ ಸ್ವಾಗತಿಸಿ, ಪಂ ಅಭಿವೃದ್ದಿ ಅಧಿಕಾರಿ ಮಾಯಾಪ್ರಭು ವಂದಿಸಿದರು.

 

888p

By suddi9

Leave a Reply

Your email address will not be published. Required fields are marked *