ಮೂಡುಬಿದಿರೆ: ದಿ.ಲಾರೆನ್ಸ್ ರೊಡ್ರಿಗಸ್ ಅವರ ಪತ್ನಿ, ಶಿರ್ತಾಡಿ ಕರಿಕುಮೇರಿನ ಶತಾಯುಷಿ ಮಾರ್ಶಿಲಿನ್ ಲೋಬೊ(106) ಸೋಮವಾರ ನಿಧನರಾದರು. ನಾಲ್ವರು ಪುತ್ರರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.

ಶಿರ್ತಾಡಿಯಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಪರಿಸರ ರಕ್ಷಣೆ, ನೀರಿನ ಸಂರಕ್ಷಣೆ ಮಾಡಿದ್ದ ಅವರು, ಹೈನುಗಾರಿಕೆಯಲ್ಲೂ ಹೆಚ್ಚುನ ಆಸಕ್ತಿ ಹೊಂದಿದ್ದರು. ಬಡ ಕುಟುಂಬಗಳಿಗೆ ತನ್ನ ಇಳಿವಯಸ್ಸಿನಲ್ಲೂ ಸಹಾಯ ಮಾಡುವ ಮೂಲಕ ಹೆಸರುವಾಸಿಯಾಗಿದ್ದರು.
