ಬಂಟ್ವಾಳ:ಇಲ್ಲಿನ ರಾಯಿ ಶ್ರೀ ಸ್ವಾಮಿ ವಿವೇಕಾನಂದ ಫ್ರೆಂಡ್ಸ್ ಸರ್ಕಲ್ ವತಿಯಿಂದ ಲಯನ್ಸ್ ಕ್ಲಬ್ ಮಾಜಿ ವಲಯಾಧ್ಯಕ್ಷ ದಿವಂಗತ ದೇವಪ್ಪ ಶೆಟ್ಟಿ ಮಾವಂತೂರು ಇವರ ಸ್ಮರಣಾರ್ಥ ಡಿ.1ರಂದು ಸಂಜೆ 7.30 ಗಂಟೆಗೆ ರಾಯಿ ಪೇಟೆಯಲ್ಲಿ ‘ಸಂಸ್ಮರಣೆ ಮತ್ತು ಜಿಲ್ಲೆಯ ಆಯ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ’ ಕಾರ್ಯಕ್ರಮ ಆಯೋಜಿಸಲಾಗಿದೆ.
ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ರಮೇಶ ಭಟ್ ಮಾದೇರಿ, ಪುರೋಹಿತ ರಾಜಾರಾಮ ಭಟ್ ಮಾವಂತೂರು, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ, ಎಲ್ಲೈಸಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ, ಉದ್ಯಮಿ ಸಂಜೀವ ಶೆಟ್ಟಿ ಬೋಳಂತೂರುಗುತ್ತು ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
