ಮೂಡುಬಿದಿರೆ: ಅಕ್ಷರ ಸಂಸ್ಕøತಿಯಲ್ಲಿ ಬಹುತ್ವದ ಸಂಸ್ಕøತಿಯ ಬುನಾದಿಯನ್ನು ಸಾಹಿತ್ಯದೊಳಗೆ ಕಾಣಲು ಕಷ್ಟಸಾಧ್ಯ, ಸಾಹಿತ್ಯ ಭಾಷೆ, ಕಲೆ, ಸಾಮಾಜಿಕವಾಗಿ ಮುಂದುವರೆದು ವರ್ಣ ಮುಕ್ತ ಸಂಸ್ಕøತಿಯನ್ನು ಕನ್ನಡ ಸಮುದಾಯದೊಳಗೆ ಕಾಣಬಹುದು, ಈ ದೇಶವನ್ನು ಅಕ್ಷರಸ್ಥರನ್ನಾಗಿ ಮಾಡಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. ಅಲ್ಲದೆ ಒಂದು ಅಕ್ಷರ ಸಂಸ್ಕøತಿಯ ವಿನಾಶ ಒಂದು ಜನಾಂಗದ ನಾಶಕ್ಕೆ ಸಮಾನವಾದುದೆಂದು ಖ್ಯಾತ ಸಂಶೋಧಕ ಡಾ. ಷ. ಶೆಟ್ಟರ್ ಹೇಳಿದರು.

ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಸತತ ಮೂರು ದಿನಗಳ ಕಾಲ ನಡೆಯಲಿರುವ ಕನ್ನಡ ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ-2018 ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ, ಕಳಸಿಗೆಯ ಮೇಲಿಟ್ಟ ಭತ್ತದ ತೆನೆಗೆ ಹಾಲೆರೆದು, ಭಗದ್ಗೀತೆಯ ಪುಟ ತೆರೆಯುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಅಶೋಕ ಚಕ್ರವರ್ತಿಯ ಕಾಲಾವಧಿಯಲ್ಲಿ ಕನ್ನಡ ಭಾಷೆಯು ಬೆಳವಣಿಗೆಯ ಹಾದಿಯ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ನಾವು ಅನಾದಿ ಕಾಲದಿಂದ ಬೆಳೆದು ಬಂದ ಅಕ್ಷರ ಸಂಸ್ಕøತಿಯನ್ನು ಅನುಸರಿಸಿಕೊಂಡು ಬೆಳೆಯುತ್ತಿದ್ದೇವೆ. ಅಕ್ಷರ ವ್ಯವಹಾರದಲ್ಲಿ ಕನ್ನಡ ಮೊದಲನೆಯ ಸ್ಥಾನದಲ್ಲಿದ್ದು, ಸಮಾಜದಲ್ಲಿ ಬಹುತ್ವವನ್ನು ಕಾಣುವ ಬದಲು ಏಕತ್ವವನ್ನು ಕಾಣುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಕನ್ನಡದ ಉಗಮವಾದುದು ಹಲ್ಮಿಡಿ ಶಾಸನದ ತರುವಾಯ ಎಂಬ ಮಾತು ಅರ್ಧ ಸತ್ಯವಾಗಿದ್ದು ಹಲ್ಮಿಡಿ ಶಾಸನಕ್ಕಿಂತಲೇ ಮೊದಲೇ ಕನ್ನಡದ ಉಗಮವಾಗಿದೆ. ಪಾಶ್ಚಾತ್ಯ ಪಂಡಿತರ ನಡುವಿದ್ದ ದ್ವಂದ್ವದ ಪರಿಣಾಮ ಐತಿಹಾಸಿಕ ಆಧಾರಗಳು ಸರಿಯಾದ ಉಲ್ಲೇಖವಿಲ್ಲ ಎಂದು ಅವರು ತಿಳಿಸಿದರು.
ನಾನು ಈ ವರೆಗೆ ಬೇರೆಯವರು ನೀಡಿದ ಇತಿಹಾಸವನ್ನು ವಿದ್ಯಾರ್ಥಿಗಳಿಗೆ ಬೋಧಿಸಿದ್ದು, ಅದನ್ನು ನನ್ನ ವಿದ್ಯಾರ್ಥಿಗಳು ಅದನ್ನೆ ಮನನ ಮಾಡಿಕೊಂಡಿದ್ದಾರೆ. ನಾನೇ ತಿಳುವಳಿಕೆ ಮಾಡಿಕೊಂಡ ಇತಿಹಾಸವನ್ನು ಬೋಧಿಸುವಲ್ಲಿ ಎಡವಿದ್ದೇನೆ ಅದಕ್ಕಾಗಿ ವಿದ್ಯಾರ್ಥಿಗಳಲ್ಲಿ ನಾನು ಕ್ಷಮೆ ಕೇಳುತ್ತೇನೆ. ಇತಿಹಾಸ, ಸಂಸ್ಕøತಿಯ ಅಧ್ಯಯನಕಾರರು ಹಳೆಯ ಪಠ್ಯಪುಸ್ತಕವನ್ನು ಅಧ್ಯಯನಕ್ಕಾಗಿ ಅಲ್ಲದೆ ಕೇವಲ ಕುತೂಹಲಕ್ಕಾಗಿ ಓದಬೇಕೇ ವಿನಃ ಹೊಸ ಚಿಂತನೆಗಾಗಿ ಸ್ವ ಸಂಶೋಧನೆಗೆ ತೊಡಗಬೇಕು ಎಂದು ಹೇಳಿದರು.

ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಾಹಿತಿ ಮತ್ತು ಸಂಶೋಧಕಿ ಡಾ. ಮಲ್ಲಿಕಾ ಎಸ್. ಘಂಟಿ, ” ಭಾಷೆಯನ್ನು, ಧರ್ಮವನ್ನು ಮನುಷ್ಯನ್ನು ಏಕರೂಪಿಯಾಗಿ ಕಲ್ಪಿಸುವುದೇ ವಿಚಿತ್ರವಾಗಿದೆ. ಇತಿಹಾಸದ ಜೊತೆಗೆ ವರ್ತಮಾನದ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇದನ್ನರಿತು ಇಂದಿನ ದಿನಗಳಲ್ಲಿ ನಮ್ಮ ಸೃಜನಶೀಲತೆಯನ್ನು, ಸಾಮಾಜಿಕತೆಯನ್ನು, ಧಾರ್ಮಿಕ ಪರಿಸರವನ್ನು, ರಾಜಕೀಯ ಸಿದ್ಧಾಂತಗಳನ್ನು, ಭಾಷಾ ವೈವಿಧ್ಯತೆಗಳನ್ನು ರೂಢಿಸಿಕೊಳ್ಳಬೇಕಾಗಿದೆ ಎಂದರು.
ಏಕ ಸಂಸ್ಕøತಿಯನ್ನು ಜಾರಿಗೊಳಿಸಲು ಯತ್ನಿಸುತ್ತಿರುವ ಧರ್ಮಗಳೆಲ್ಲವೂ ಇಂದು ಹಿಂಸಾ ಸ್ವರೂಪ ತಾಳುತ್ತಿವೆ. ಅದಕ್ಕಿರುವ ಕೇಂದ್ರ ಆಶಯವೇ ಹಿಂಸೆ. ಹೀಗಾಗಿ ಒಂದು ಹಂತದಲ್ಲಿ ಜನಪರವಾಗಿದ್ದಂತಹ ಧರ್ಮಗಳು ನಂತರದಲ್ಲಿ ನಿರಂಕುಶಮತಿಗಳಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಯಾವುದೋ ಕಾಲದಲ್ಲಿ ಹುಟ್ಟಿಕೊಂಡ ನಂಬಿಕೆ ಆಚಾರಗಳು ಎಲ್ಲ ಕಾಲಕ್ಕೆ ನಿಯಂತ್ರಕಗಳಾಗಿ ನಿಲ್ಲುವುದರ ಹಿಂದೆ ಬಹುದೊಡ್ಡ ರಾಜಕಾರಣವಿರುತ್ತದೆ. ಅದು ಲಿಂಗ ರಾಜಕಾರಣವೂ ಹೌದು ಧಾರ್ಮಿಕ ರಾಜಕಾರಣವೂ ಆಗಿರುತ್ತದೆ. ವೈಜ್ಞಾನಿಕ ದೃಷ್ಟಿಯಲ್ಲಿ ತೀರ್ಪನ್ನು ಕಾಣದೇ ಅದೆಷ್ಟೋ ಜನ ಪರ-ವಿರೋಧದ ನಡುವೆ ಹೋರಾಡುತತಿದ್ದಾರೆ ಎಂದು ಅವರು ತಿಳಿಸಿದರು.
ರಾಮ-ರಹೀಮರು ಕತ್ತಿ ಮಸಿಯುತ್ತಿರುವುದೇಕೆ? ಅಮಾಯಕರ ರಕ್ತ ಬೀದಿಯಲ್ಲಿ ಬೀಳದಂತೆ ನೋಡುವ ಜವಾಬ್ದಾರಿ ಬರಹಗಾರರ ಮೇಲಿದ್ದು ಕವಿ, ಲೇಖಕ, ಕಲಾವಿದನ ಮೇಲೆ ಸಾಮಾಜಿಕ ಹೊಣೆಗಾರಿಕೆ ಇದೆ ಎಂದು ಅವರು ತಿಳಿಸಿದರು.
ಶಿಕ್ಷಣ, ಆರೋಗ್ಯ, ಆಹಾರ, ವಸತಿ ಈ ಸಂಗತಿಗಳು ರಾಷ್ಟ್ರೀಕರಣಗೊಳ್ಳಬೇಕು. ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಎಲ್ಲವೂ ನಿಲುಕುವಂತೆ ಆದಾಗ ಕಲಿಕಾ ಮಾಧ್ಯಮದ ಬಗ್ಗೆ ಮಾತನಾಡಿದರೆ ಅಕ್ಷರ ವಂಚಿತ ಲೋಕ ಕೇಳಬಲ್ಲದು ಎಂದು ಅವರು ತಿಳಿಸಿದರು.

ಆಳ್ವಾಸ್ ನುಡಿಸಿರಿ ರೂವಾರಿ ಡಾ. ಎಂ. ಮೋಹನ ಆಳ್ವ ನುಡಿಸಿರಿ ಹಾಗೂ ಸಮ್ಮೇಳನದ ಪರಿಕಲ್ಪನೆಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿ ಅಭ್ಯಾಗತರನ್ನು ಸ್ವಾಗತಿಸಿದರು.
ಇದೇ ವೇಳೆಯಲ್ಲಿ ಉದ್ಘಾಟಕರನ್ನು, ಸಮ್ಮೇಳನದ ಅಧ್ಯಕ್ಷರನ್ನು ಗೌರವಿಸಲಾಯಿತು. ನಾರಾಯಣೀ ದಾಮೋದರ ವಿರಚಿತ “ನುಡಿ ನುಡಿತ” ಕೃತಿಯನ್ನು ಹಾಗೂ ಮಿಜಾರಿನ ಶೋಭಾವನದ ಕ್ಯೂ. ಆರ್ ಕೋಡನ್ನು ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಎ. ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್, ಕೆ. ಅಮರನಾಥ ಶೆಟ್ಟಿ, ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡ, ಕೆ. ಶ್ರೀಪತಿ ಭಟ್, ದ.ಕ ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜಯಶ್ರೀ ಅಮರನಾಥ ಶೆಟ್ಟಿ ಹಾಗೂ ನುಡಿಸಿರಿಯ ಘಟಕಾ ಅಧ್ಯಕ್ಷರು ಮತ್ತು ಮತ್ತಿತರರು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ ನಿರೂಪಿಸಿದರು, ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ವಂದಿಸಿದರು.
