ಮೂಡುಬಿದಿರೆ:  ಪಾರಂಪರಿಕ ಕಲೆ , ಚಿತ್ರಕಲೆ, ಬಹುಸ್ಥಾನದ ಕೊರತೆಯನ್ನು ಗಮನಿಸಿ ನುಡಿಸಿರಿಯಲ್ಲಿ ಚಲನಚಿತ್ರಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ಕಲಾತ್ಮಕ ಸಿನಿಮಾಗಳಿಗೆ ಮಾರುಕಟ್ಟೆಯಲ್ಲಿ ಸ್ಥಾನವಿಲ್ಲದ ಕಾರಣ, ಸಿನೆಮಾ ನೋಡುಗರ ಸಂಖ್ಯೆ ಕಡಿಮೆಯಾಗಿದೆ. ಇಂದಿನ ಯುವಜನತೆ ಹೊಂದಿಕೊಂಡಿರುವ ಸಾಮಾಜಿಕ ಜಾಲತಾಣವನ್ನು, ಸಾಂಸ್ಕøತಿಕ ಜಾಲತಾಣವನ್ನಾಗಿ ಪರಿವರ್ತಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಡಾ. ನಾಗತಿಹಳ್ಳಿ ಚಂದ್ರಶೇಕರ್ ಹೇಳಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರು ವತಿಯಿಂದ ಹಾಗೂ ಆಳ್ವಾಸ್ ನುಡಿಸಿರಿಯ ಅಂಗವಾಗಿ ನಡೆಯುವ ಸಿನಿಸಿರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

chalanachithrasiri
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಡಾ. ನಾ. ದಾಮೋದರ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಆಧುನಿಕ ಯುಗದಲ್ಲಿ ಜನರ ಸದಾಭಿರುಚಿ ತಕ್ಕಂತೆ ಮಕ್ಕಳ ಆಸಕ್ತಿಗೆ ಯೋಗ್ಯವಾದ ಸಿನಿಮಾಗಳ ಪ್ರದರ್ಶನ ಈ ಸಂಸ್ಥೆಯೊಳಗೆ ನಡೆಯುತ್ತಿದ್ದು, ಸಿನಿಸಿರಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗಿದೆ. ಮೌಲ್ಯಾಧಾರಿತ ಸಿನಿಮಾಗಳನ್ನು ಮಕ್ಕಳಿಗೆ ಪ್ರದರ್ಶಿಸುವುದರಿಂದ ಇದರಲ್ಲಿನ ಶ್ರೇಷ್ಠವಾದ ಅಂಶವನ್ನು ಪರಿಗಣಿಸುವ ಅವಕಾಶ ಸಿಕ್ಕಂತಾಗುತ್ತದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಮಾತನಾಡಿ, ಕನ್ನಡ ಚಲನಚಿತ್ರರಂಗ ಬೇರೆ ಬೇರೆ ಚಿತ್ರವನ್ನು ನೀಡಿ ಅದ್ಭುತ ಸಾಧನೆಯನ್ನು ಮಾಡಿದೆ. ಕನ್ನಡ ಚಿತ್ರರಂಗದ ಈ ಸಾಧನೆಯು ಕನ್ನಡ ಭಾಷೆಯನ್ನು ಇನ್ನಷ್ಟು ಭಾಷೆಯ ಕಂಪು ಹರಡಿಸುವ ಪ್ರಯತ್ನ ಮಾಡುತ್ತಿದೆ. ಕಲಾತ್ಮಕಚಿತ್ರದಿಂದ ಕಮರ್ಶಿಯಲ್ ಸಿನಿಮಾಗಳಿಗೆ ಬದಲಾಗುತ್ತಿರುವ ಚಿತ್ರರಂಗ, ಇಂದು ಹೆಚ್ಚಿನ ಸಂಖ್ಯೆಯಲ್ಲಿ ಅರ್ಥವಿಲ್ಲದ ಸಮಾಜಕ್ಕೆ ಸಿನಿಮಾ ನೀಡುತ್ತಿದೆ. ತಾವು ಕೂಡ ಕನ್ನಡಬಾಷೆ ಹಾಗೂ ಕೃಷಿಗೆ ಸಂಬಂಧಿಸಿದ ಎರಡು ಸಿನಿಮಾವನ್ನು ಮಾಡುವ ತಮ್ಮ ಮನದ ಮಾತನ್ನು ಹೇಳಿಕೊಂಡರು.
ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಡಾ.ಶ್ರೀನಿವಾಸ ಹೊಡಿಯಾಲ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ.ಮೌಲ್ಯ ಜೀವನ್‍ರಾಮ್ ನಿರೂಪಿಸಿದರು.

ಪ್ರದರ್ಶನಗೊಳ್ಳಲಿರುವ ಚಲನಚಿತ್ರಗಳು:

ನುಡಿಸಿರಿಯ ಮೊದಲ ದಿನ ಅಮ್ಮಚ್ಚಿಯೆಂಬ ನೆನಪು( ಕುಂದ ಕನ್ನಡ), ತಳಂಗ್ ನೀರ್(ಕೊಡವ) ಚಲನಚಿತ್ರಗಳು ಪ್ರದರ್ಶನಗೊಂಡವು. ಇಂದು ಕುವೆಂಪು ಸಭಾಂಗಣದಲ್ಲಿ ಬೆಳಗ್ಗೆ 10ಗಂಟೆಗೆ ಕಾಡಹಾದಿ ಹೂಗಳು(ಕನ್ನಡ), ಮಧ್ಯಾಹ್ನ 3 ಗಂಟೆಗೆ ಶುದ್ಧಿ (ಕನ್ನಡ) , ಸಾಯಂಕಾಲ 5.30ಕ್ಕೆ ಪಡ್ಡಾಯಿ(ತುಳು) ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ನ.18ರಂದು ಬೆಳಗ್ಗೆ 10ಗಂಟೆಗೆ ಸೋಫಿಯಾ-ಎ ಡ್ರೀಮ್ ಗರ್ಲ್( ಕೊಂಕಣಿ) ಹಾಗೂ ಸಾಯಂಕಾಲ 5 ಗಂಟೆಗೆ ಹೆಬ್ಬೆಟ್ ರಾಮಕ್ಕ(ಕನ್ನಡ) ಸಿನಿಮಾ ಪ್ರದರ್ಶನಗೊಳ್ಳಲಿದೆ.

By Suddi9

Leave a Reply

Your email address will not be published. Required fields are marked *