ವಿಟ್ಲ: ವಿಠಲ ವಿದ್ಯಾ ಸಂಘದ ವಿಠಲ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗದ ವಾರ್ಷಿಕ ಕ್ರೀಡಾಕೂಟವನ್ನು ಪುತ್ತೂರು ವಿವೇಕಾನಂದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ ವಿ 15-11-2018 ರಂದು ಕ್ರೀಡಾ ಧ್ವಜಾರೋಹನ ಮಾಡಿ ಉದ್ಘಾಟಿಸಿದರು.
ವಿಠಲ ವಿದ್ಯಾ ಸಂಘದ ಕಾರ್ಯದರ್ಶಿ ಯಶವಂತ ವಿಟ್ಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ನಿತ್ಯಾನಂದ ನಾಯಕ್, ಸದಸ್ಯರುಗಳಾದ ಬಾಬು ಕೊಪ್ಪಳ ಮತ್ತು ಪದ್ಮಯ್ಯ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಾಜ್ಯ ಮಟ್ಟದ ಕ್ರೀಡಾ ಪಟುಗಳಾದ ಧನುಶ್ರೀ, ಹಸ್ತಾ ಜೈನ್ ಮತ್ತು ಬಳಗದವರು ಕ್ರೀಡಾ ಜ್ಯೋತಿ ಬೆಳಗಿಸಿದರು. ವಿದ್ಯಾರ್ಥಿ ಸಂಘದ ನಾಯಕ ಪ್ರಜ್ವಲ್ ಪ್ರತಿಜ್ಞಾವಿಧಿ ಬೊಧಿಸಿದರು.
ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಸ್ವಾಗತಿಸಿದರು ಕಲ್ಪಿತಾ, ರಚನಾ ಮತ್ತು ಬಳಗದವರು ಆಶಯಗೀತೆ ಹಾಡಿದರು. ವಿಠಲ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ವಂದಿಸಿದರು. ಅಧ್ಯಾಪಕ ಶಂಕರನಾರಾಯಣ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
