ಕೈಕಂಬ:ಗಂಜಿಮಠ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ಹಾಗೂ ಆಯುರ್ ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಪೌಂಡೇಶನ್ ಗಂಜಿಮಠ ವತಿಯಿಂದ ಮಧುಮೇಹ ಮುಕ್ತ ಜನಜಾಗೃತಿ ಅಭಿಯಾನ ಅಂಗವಾಗಿ ನ.14ರಂದು ಬುಧವಾರ ಬೆಳಗ್ಗೆ 8ರಿಂದಗಂಜಿಮಠ ಗಣಪತಿದೇವಸ್ಥಾನದಿಂದ ಕೈಕಂಬದವರೆಗೆ ಮಧುಮೇಹ ತಡೆಗೆ ವೇಗದ ನಡಿಗೆ ಬ್ರತ್ ಜನಜಾಗೃತಿ ಜಾಥಾ ಹಾಗೂ ಉಚಿತ ಮಧುಮೇಹ ತಪಾಸಣೆ ಶಿಬಿರವು ಬೆಳಗ್ಗೆ 10 ರಿಂದ 12.30ರವರೆಗೆ ಗಂಜಿಮಠ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರಯಲ್ಲಿ ನಡೆಯಲಿದೆ.
ಜಾಥದ ಬಳಿಕ ಕೈಕಂಬ ಶ್ರೀರಾಮ್ ಸಭಾಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಹರಿರಾವ್ ವಹಿಸಲಿದ್ದಾರೆ. ಹಾಗೂ ಮಧು ಮೇಹ ನಿಯಂತ್ರಣದಲ್ಲಿ ಆಯುರ್ವೇದ ಪಾತ್ರ ಕುರಿತು ಆಯುರ್ ಸ್ಪರ್ಶ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರಯ ಅಧ್ಯಕ್ಷ ಡಾ.ಸತೀಶ್ ಶಂಕರ್ ಉಪನ್ಯಾಸ ನೀಡಲಿದ್ದಾರೆ.
ಶ್ರೀಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್ ಜಾತಾ ಉದ್ಘಾಟಿಸಲಿದ್ದಾರೆ.ಶಾಸಕ ರಾಜೇಶ್ ನಾೈಕ್,ಜಿಲ್ಲಾಪಂಚಾಯತಿ ಸದಸ್ಯ ಯು.ಪಿ.ಇಬ್ರಾಹಿಂ, ಬಿಲ್ಲವ ಮಹಾಸಂಘದ ಕಾರ್ಯದರ್ಶಿ ಗಣೇಶ್ ಪೂಜಾರಿ, ತಾ.ಪಂ.ಉಪಾಧ್ಯಕ್ಷೆ ಪೂರ್ಣಿಮಾ , ಗ್ರಾ.ಪಂ. ಅಧ್ಯಕ್ಷೆ ಮಾಲತಿ,ಉಪಾಧ್ಯಕ್ಷ ಝಾಕೀರ್,ಐಡಿಯಲ್ ಶಾಲೆಯ ಸಂಚಾಲಕ ವೈ.ಮಹಮ್ಮದ್ ಬ್ಯಾರಿ , ರಾಜ್ ಅಕಾಡೆಮಿಯ ಯತಿರಾಜ್ ಶೆಟ್ಟಿ,ಮಮತಾ ಶೆಟ್ಟಿ,ಗಣೇಶ್ ರಾವ್ ಸಿ.ಏ. ಕೈಕಂಬ,ಬಜಪೆ ಠಾಣಾನಿರೀಕ್ಷಣಾ ಅಧಿಕಾರಿ ಪರಶಿವ ಮೂರ್ತಿ, ಡಾ.ನಾರಾಯಣ ಅಸ್ರ, ಡಾ.ಶ್ರೀಪತಿ ಕಿನ್ನಿಕಂಬಳ, ಡಾ. ಶ್ರೀದೇವಿ ಆರ್. ಭಟ್, ಪ್ರಕಾಶ್ ಇಲಂತಿಲ,ಚಂದ್ರಹಾಸ ಶೆಟ್ಟಿ ನಾರಳ, ಸತೀಶ್ಚಂದ್ರ ಸಾಲ್ಯಾನ್, ನಂದಾ ಉಮಾಪ್ರಿ ಗಡಿಯಾರ್, ರಾಜೇಶ್ ಕಾಮತ್, ಮತ್ತಿತರು ಭಾಗವಹಿಸಲಿದ್ದಾರೆ.
ಎಂದು ಡಾ.ಸತೀಶ್ಶಂಕರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
