ಮೂಡುಬಿದಿರೆ: ವಿಶ್ವಬ್ರಾಹ್ಮಣರಿಗೆ ವೈದಿಕ ಹಕ್ಕನ್ನು ಎತ್ತಿ ಹಿಡಿದ ತೆಲಂಗಾಣ ರಾಜ್ಯದ ಚಿತ್ತೂರು ಜಿಲ್ಲಾ ಅದಾಲತ್ ಕೋರ್ಟ್ ತೀರ್ಪಿನ ದ್ವಿಶತಮಾನ ಸಂಭ್ರಮ ಇಲ್ಲಿನ ಅಲಂಗಾರು ಜಗದ್ಗುರು ಶ್ರೀ ಅಯ್ಯ ನಾಗಲಿಂಗ ಸ್ವಾಮಿ ಮಠದಲ್ಲಿ ನಡೆಯಿತು.
ವಿಶ್ವಕರ್ಮ ಸಂಸ್ಕøತಿ ಪ್ರಸಾರ ಪ್ರತಿಷ್ಠಾನ ಇದರ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಯಿತು.
ಕ್ಷೇತ್ರದ ವ್ಯವಸ್ಥಾಪಕ ಬಿ. ವಿಶ್ವನಾಥ ಪುರೋಹಿತ್, ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಸುಂದರ ಆಚಾರ್ಯ,ಮೊಕ್ತೇಸರ ಜಯಕರ ಪುರೋಹಿತ್, ಅಯ್ಯಪ್ಪಯ್ಯ ಸ್ವಾಮಿ, ಪತ್ರಕರ್ತ ಕುಂಜೂರು ಮಂಜುನಾಥ ಆಚಾರ್ಯ, ಪ್ರಧಾನ ಅರ್ಚಕ ವಿಘ್ನೇಶ್ ಪುರೋಹಿತ್, ಮಾತನಾಡಿದರು. ಘಟನೆಗೆ ಮಹತ್ತರ ಕಾರಣಗಳನ್ನು, ಧನಾತ್ಮಕ – ಋಣಾತ್ಮಕ ವಿಷಯಗಳ ಬಗ್ಗೆ ಜಿ.ಎಸ್ ಪುರಂದರ ಪುರೋಹಿತ್ ಮಾತನಾಡಿದರು. ಪ್ರತಿಷ್ಠಾನದ ಸಂಚಾಲಕ, ಅದ್ಯಾಪಕ ಕುಂಜೂರು ಗಣೇಶ್ ಆಚಾರ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

By suddi9

Leave a Reply

Your email address will not be published. Required fields are marked *