ವಿಟ್ಲ: ದೇವಾಡಿಗರ ಸಮಾಜ ಸೇವಾ ಸಂಘ ವಿಟ್ಲ ವಲಯ ಇದರ 27 ನೇ ವರ್ಷದ ವಾರ್ಷಿಕ ಮಹಾಸಭೆ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಮಂಗಳಪದವು ದೇವಾಡಿಗರ ಸಮುದಾಯ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಎಂ ಜನಾರ್ಧನ ಸಭಾಧ್ಯಕ್ಷತೆ ವಹಿಸಿದ್ದರು.

ದೇರಳಕಟ್ಟೆ ಬೆಳ್ಮ ನಿರ್ಗತಿಕ ಮಹಿಳಾ ಸೇವಾಶ್ರಮದ ಎಂ ದೇವದಾಸ ಮಣ್ಣಗುಡ್ಡೆ ಇವರು ಸಭೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷ ವಿ ರಮಾನಾಥ ದೇವಾಡಿಗ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚಂದ್ರಹಾಸ ದೇವಾಡಿಗ ಕೊಡಂಗೆ ಸ್ವಾಗತಿಸಿದರು. ಕಾರ್ಯದರ್ಶಿ ರಮೇಶ್ ಮಂಕುಡೆ ವರದಿ ವಾಚಿಸಿದರು. ಆಶಯಗೀತೆ ಹಾಡಿದ ಕೋಶಾಧಿಕಾರಿ ವಿಶ್ವನಾಥ ದೇವಾಡಿಗ ವಂದಿಸಿದರು.
