ಮೂಡುಬಿದಿರೆ: ಹಲವು ವರ್ಷಗಳಿಂದ ಪಾಶ್ರ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಪ್ರಾಂತ್ಯ ಗ್ರಾಮದ ಕಾಯರ್‍ಗುಂಡಿಯಲ್ಲಿ ಗುರುವಾರ ನಡೆದಿದೆ.
ಕಾಯರ್‍ಗುಂಡಿ ನಿವಾಸಿ ಮಹಮ್ಮದ್ ಹಸನ್ (49) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಧ್ಯಾಹ್ನದ ವೇಳೆಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತಮ್ಮ ಮನೆಯ ಹಾಲ್‍ನಲ್ಲಿದ್ದ ಕಬ್ಬಿಣದ ರಾಡ್‍ಗೆ ನೈಲಾನ್ ಹಗ್ಗವನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣವನ್ನು ಮೂಡುಬಿದಿರೆ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಪಾಶ್ರ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ ಹಸನ್ ಅವರು ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ.
