ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಕ್ಕುಡ ಶ್ರೀ ದುರ್ಗಾಂಬ ತಂಡದ ವಾರ್ಷಿಕೋತ್ಸವ ನಡೆಯಿತು.
ಒಕ್ಕೂಟದ ಅಧ್ಯಕ್ಷ ಜಗನ್ನಾಥ ಇವರ ಅಧ್ಯಕ್ಷತೆ ವಹಿಸಿದ್ದರು.

ಮೂಕಾಂಬಿಕ ದೇವಸ್ಥಾನದ ಪದ್ಮಿನಿ ರಾಮ ಭಟ್, ವಲಯ ಮೇಲ್ವಿಚಾರಕ ಮುರಳೀಧರ ಮತ್ತು ಸೇವಾಪ್ರತಿನಿಧಿ ಪ್ರೇಮಲತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪದಾಧಿಕಾರಿಗಳಾದ ಕಾವೇರಿ, ದಯಾನಂದ, ಆನಂದ ಮತ್ತು ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಮಣ್ಣ ಸ್ವಾಗತಿಸಿದರು. ವನಿತಾ ವರದಿ ವಾಚಿಸಿದರು. ಸೌಮ್ಯ ವಂದಿಸಿದರು. ಲೀಲಾವತಿ ನಿರೂಪಿಸಿದರು.

