ವಿಟ್ಲ: ಬೊಳಂತಿಮೊಗರು ವಿನೂತನ ಯುವಕ ಮಂಡಲದ 17ನೇ ವರ್ಷದ ದಸರಾ ಕ್ರೀಡಾಕೂಟದ ಬಹುಮಾನ ವಿತರಣಾ ಕಾರ್ಯಕ್ರಮವು ವಿಟ್ಲ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಜತ್ತಪ್ಪ ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ, ಬೊಳಂತಿಮೊಗರು ಕನ್ನಡ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ವಿಶ್ವನಾಥ ನಾಯ್ತೊಟ್ಟು, ಸಾಮಾಜಿಕ ಕಾರ್ಯಕರ್ತ ಲಕ್ಷ್ಮಣ ಮಾಡ, ಉದ್ಯಮಿ ಉಮೇಶ್ ಇಂದ್ರಪಡ್ಪು, ಮಾಮೇಶ್ವರ ಬಜರಂಗದಳ ಸಂಚಾಲಕ ಮನೋಜ್ ಕೈಂತಿಲ ಮತ್ತು ಯುವ ಮುಂದಾಳು ಅಬೂಬಕ್ಕರ್ ಕೊಳಂಬೆ ಇವರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಖೋ ಖೋ ಆಟಗಾರ ಪುನೀತ್ ಬೊಡ್ಡೋಣಿ, ಕ್ರೀಡಾ ತರಬೇತುದಾರ ಸಂತೋಷ್ ಕೆಯ್ಯೂರು ಮತ್ತು ಡಾ| ಗಿರಿಧರ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಅಧ್ಯಕ್ಷ ಪ್ರವೀಣ್ ನಡುವಡ್ಕ ಸ್ವಾಗತಿಸಿದರು. ಪುರಂದರ ಅಂಚನ್ ವಂದಿಸಿ ನಿರೂಪಿಸಿದರು.
