ವಿಟ್ಲ: ವಿನೂತನ ಯುವಕ ಮಂಡಲ ಬೊಳಂತಿಮೊಗರು ಇದರ 17ನೇ ವರ್ಷದ ದಸರಾ ಕ್ರೀಡಾಕೂಟವು ಬೊಳಂತಿಮೊಗರು ಕನ್ನಡ ಶಾಲಾ ಮೈದಾನದಲ್ಲಿ ನಡೆಯಿತು.
ಈ ಕ್ರೀಡಾಕೂಟದ ಉದ್ಘಾಟನೆಯನ್ನು ಬೊಳಂತಿಮೊಗರು ಪ್ರೌಢ ಶಾಲಾ ಶಿಕ್ಷಕ ಪ್ರವೀಣ್ ಕುಮಾರ್ ನೆರವೇರಿಸಿದರು.
ವಿಟ್ಲ ಸಿ ಪಿ ಸಿ ಆರ್ ಐ ನಿವೃತ್ತ ನೌಕರ ನಾರಾಯಣ ಪಳೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿಟ್ಲ ಪಟ್ಟಣ ಪಂಚಾಯತ್ ಸದಸ್ಯೆ ಇಂದಿರಾ ಅಡ್ಡಾಳಿ, ಮಾಮೇಶ್ವರ ತ್ರಿಶೂಲ್ ಫ್ರೆಂಡ್ಸ್ನ ಅಧ್ಯಕ್ಷ ಮಿಥುನ್ ಮಾಮೇಶ್ವರ, ನವಚೇತನ ಗೆಳೆಯರ ಬಳಗದ ಉಪಾಧ್ಯಕ್ಷ ರಾಘವ ಆಚಾರ್ಯ ಮತ್ತು ಗೌರವಾಧ್ಯಕ್ಷ ವಸಂತ ಗೌಡ ಮಾಡ್ತೇಲು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾರ್ಯದರ್ಶಿ ದಿನೇಶ್ ಮಾಡ್ತೇಲು ಸ್ವಾಗತಿಸಿದರು. ಪದ್ಮನಾಭ ಗೌಡ ಮಾಡ್ತೇಲು ಪ್ರಸ್ತಾವಿಸಿದರು. ಅಧ್ಯಕ್ಷ ಪ್ರವೀಣ್ ಮಾಡ್ತೇಲು ವಂದಿಸಿದರು. ಪುರಂದರ ಅಂಚನ್ ನಿರೂಪಿಸಿದರು.
