ಮೂಡುಬಿದಿರೆ: ಜೈನ ಪ.ಪೂ. ಕಾಲೇಜಿನಲ್ಲಿ ದ್ವಿತೀಯ ವರ್ಷದ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಿಠಲ್ ಶೇಟ್ (16.ವ.) ಅಕ್ಟೋಬರ್ 22 ರಂದು ಬೆಳಿಗ್ಗೆ 9.ಗಂಟೆಗೆ ಕೋಟೆಬಾಗಿಲ್‍ನಲ್ಲಿರುವ ತನ್ನ ಮನೆಯಿಂದ ಕಾಲೇಜಿನ ಸಮವಸ್ತ್ರ ಧರಿಸಿಕೊಂಡು ಕಾಲೇಜ್ ಬ್ಯಾಗ್‍ನೊಂದಿಗೆ ಕಾಲೇಜಿಗೆ ಹೋದವನು ಸಂಜೆಯಾದರೂ ಮನೆಗೆ ಬಾರದೆ ಕಾಣೆಯಾಗಿದ್ದಾನೆ.
ಸ್ನೇಹಿತರ ಹಾಗೂ ಸಂಬಂಧಿಕರ ಮನೆಯಲ್ಲಿ ಹುಡುಕಿದರೂ ಪತ್ತೆಯಾಗಿಲ್ಲ ಎಂದು ಆತನ ಅಣ್ಣ ಹರ್ಷಾ ಶೇಟ್ ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾದವರ ವಿವರ ಇಂತಿದೆ: ತಂದೆಯ ಹೆಸರು ತಾರಾನಾಥ ಶೇಟ್, ಎತ್ತರ 5 ಅಡಿ 5 ಇಂಚು, ಎಣ್ಣೆ ಕಪ್ಪು ಮೈ ಬಣ್ಣ, ಕೋಲು ಮುಖ, ಸಪೂರ ಶರೀರ, ಕಪ್ಪು ಕೂದಲು, ಬಿಳಿ ಬಣ್ಣದ ಅರ್ಧ ತೋಳಿನ ಶರ್ಟ್, ಬೂದು ಬಣ್ಣದ ಪ್ಯಾಂಟ್ ಮತ್ತು ಬೆಲ್ಟ್ (ಸಮವಸ್ತ್ರ), ಕುತ್ತಿಗೆ ಬಲಬದಿಯಲ್ಲಿ ಎಳ್ಳು ಗಾತ್ರದ ಕಪ್ಪು ಮಚ್ಚೆ ಹೊಂದಿದ್ದು, ಕನ್ನಡ, ತುಳು, ಹಿಂದಿ, ಇಂಗ್ಲೀಷ್, ಕೊಂಕಣಿ ಭಾಷೆ ಮಾತನಾಡುತ್ತಾನೆ.
ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸು ಆಯುಕ್ತರು 0824-2220801, 2220800, ಮೂಡುಬಿದಿರೆ ಪೊಲೀಸು ಠಾಣೆ 08258-236333 ಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

