ಪೊಳಲಿ : ಪ್ರಕೃತಿಯೇ ದೇವರು, ಅದನ್ನು ಉಳಿಸಬೇಕಾಗಿದೆ. ಇಲ್ಲದಿದ್ದರೆ ಮುಂದಿನ ಪೀಳಿಗೆ ಉಳಿಯುವುದು ಅಸಾಧ್ಯ . ಪ್ರಕೃತಿ ಹಸಿರಾಗಿಸಲು ಪ್ರತಿಯೊಬ್ಬ ಕೈ ಜೋಡಿಸಬೇಕಾಗಿದೆ. ತುಳುನಾಡನ್ನು ಹಸಿರು ನಾಡಾಗಿ ಮಾಡುವ ಸಂಕಲ್ಪ ಮಾಡುವ ಎಂದು ಪೂಳಲಿ ಶ್ರೀರಾಮಕೃಷ್ಣ ತಪೋವನದ ಪೂಜ್ಯ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಹೇಳಿದರು.24vptarabethi
ಅವರು ದಿಶಾ ಟ್ರಸ್ಟ್ (ರಿ) ಕೈಕಂಬ,ರಾಜಶ್ರೀ ಕೃಷಿಕರ ಅಭಿವೃದ್ಧಿ ಸಂಘ ಕರಿಯಂಗಳ, ಪಲ್ಗಣಿ ಕೃಷಿಕರ ಅಭಿವೃದ್ಧಿ ಸಂಘ ಕರಿಯಂಗಳ, ಶ್ರೀ ಲಕ್ಷ್ಮಿನರಸಿಂಹ ಕೃಷಿಕರ ಅಭಿವೃದ್ಧಿ ಸಂಘ ಪಲ್ಲಿಪಾಡಿ, ಬಡಗಬೆಳ್ಳೂರು ಇವರ ಜಂಟಿ ಆಶ್ರಯದಲ್ಲಿ ಪೊಳಲಿ ರಾಮಕೃಷ್ಣ ತಪೋವನದಲ್ಲಿ ನಡೆದ ಸಂಘದ ಸದಸ್ಯರ ಸಾಮಥ್ರ್ಯಭಿವೃದ್ಧಿ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದಿಶಾ ಸಂಸ್ಥೆಯ ಸಂಯೋಜಕರಾದ ಹೆನ್ರಿ ವಾಲ್ಡರ್, ಕ್ಷೇತ್ರ ಸಂಯೋಜಕ ರುದೇಶ್ ತರಬೇತಿಯನ್ನು ನಡೆಸಿಕೊಟ್ಟರು.24vptharabethi
ಕರಿಯಂಗಳ ಪಲ್ಲಿಪಾಡಿ ರಾಜಶ್ರೀ ಕೃಷಿಕರ ಸಂಘದ ಅಧ್ಯಕ್ಷರಾದ ಸುದರ್ಶನ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ದಿಶಾ ಸಂಸ್ಥೆಯ ನಿರ್ದೇಶಕರಾದ ಸಿಲ್ವೆಸ್ಟರ್ ಡಿಸೋಜ, ಕ್ಷೇತ್ರ ಮೇಲ್ವಿಚರಕಾರಾದ ಹರಿಣಾಕ್ಷಿ, ಗುಣವತಿ ರಾಜಶ್ರೀ ಕೃಷಿಕರ ಸಂಘದ ಕಾರ್ಯದರ್ಶಿ ಕಮಲಾಕ್ಷಿ, ಪಲ್ಗುಣಿ ಕೃಷಿಕರ ಸಂಘದ ಅಧ್ಯಕ್ಷರಾದ ವಾಮನ ಪೂಜಾರಿ, ಶ್ರೀಲಕ್ಷ್ಮಿನರಸಿಂಹ ಕೃಷಿಕರ ಸಂಘದ ಅಧ್ಯಕ್ಷರಾದ ಜಿ.ವಿಷ್ಣುಮೂರ್ತಿ ಭಟ್, ಕಾರ್ಯದರ್ಶಿ ಶಾಂತ .ಆರ್ . ಶೆಟ್ಟಿ ಉಪಸ್ಥಿತರಿದ್ದರು. ರಾಜಶ್ರೀ ಕ್ರಷಿಕರ ಸಂಘದ ಕೋಶಾಧಿಕಾರಿ ರಾಜು ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಪಲ್ಗುಣಿ ಸಂಘದ ಸದಸ್ಯರಾದ ಭರತ್ ಸ್ವಾಗತಿಸಿದರು. ಲಕ್ಷ್ಮಿನರಸಿಂಹ ಕೃಷಿಕರ ಸಂಘದ ಸದಸ್ಯರಾದ ಕು/ಅಶ್ವಿನಿ ವಂದಿಸಿದರು.

By suddi9

Leave a Reply

Your email address will not be published. Required fields are marked *