ಮೂಡುಬಿದಿರೆ: ಯೆನೆಪೋಯಾ ತಾಂತ್ರಿಕ ಮಹಾ ವಿದ್ಯಾಲಯದ ಎನ್ನೆಸ್ಸೆಸ್ ಘಟಕ, ಯುವ ರೆಡ್‍ಕ್ರಾಸ್ ಘಟಕ, ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯ ಹಾಗೂ ಸಮುದಾಯ ದಂತ ವಿಭಾಗ ಯೆನೆಪೋಯಾ ದಂತ ವೈದ್ಯಕೀಯ ಕಾಲೇಜು ದೇರಳೆಕಟ್ಟೆ ಇವರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಮತ್ತು ದಂತ ತಪಾಸಣಾ ಶಿಬಿರ ರವಿವಾರ ತೋಡಾರಿನ ಯೆನೆಪೋಯಾ ತಾಂತ್ರಿಕ ಮಹಾವಿದ್ಯಾಲಯದ ವಠಾರದಲ್ಲಿ ನಡೆಯಿತು.
ಗ್ರಾಮೀಣ ಆರೋಗ್ಯದ ಉಪನಿರ್ದೇಶಕಿ ಡಾ.ಪೂನಂ ನಾಯಕ್, ದಂತ ವಿಭಾಗದ ಮುಖ್ಯಸ್ಥೆ ಡಾ.ರೇಖಾ ಪಿ. ಶೆಣೈ ಶಿಬಿರವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಅಶೋಕ್ ಶೆಟ್ಟಿ, ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಲೋಕೇಶ್, ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

ತೋಡಾರು, ಮಿಜಾರು, ಹಂಡೇಲು ಪರಿಸರದ ನಾಗರಿಕರು ಶಿಬಿರದ ಪ್ರಯೋಜನ ಪಡೆದುಕೊಂಡರು. ನಂತರ ಯೆನೆಪೋಯಾ ಆರೋಗ್ಯ ಕಾರ್ಡಿಗೆ ನೊಂದಾವಣೆ ಕೂಡಾ ಮಾಡಲಾಯಿತು.

