ಮೂಡಬಿದಿರೆ: ಇಂದಿನ ರಸಾಯನಶಾಸ್ತ್ರಜ್ಞರಿಗೆ ಸ್ಯಾಂಪಲಿಂಗ್, ಪ್ಯೂರಿಫಿಕೇಶನ್‍ನಂಥಹ ಪ್ರಯೋಗಗಳ ಬಗೆಗೆ ಸರಿಯಾದ ಮಾಹಿತಿ ಇಲ್ಲದಿರುವುದರಿಂದ, ಈ ಕ್ಷೇತ್ರದಲ್ಲಿ ಸಂಶೋಧನಾತ್ಮಕ ಅಂಶಗಳ ಕೊರತೆ ಕಾಣುತ್ತಿದೆ ಎಂದು ಡಾ ಸುಬ್ರಮಣ್ಯ ಈಶ್ವರ್ ಭಟ್ ಅಭಿಪ್ರಾಯಪಟ್ಟರು.
ಆಳ್ವಾಸ್ ಕಾಲೇಜಿನ ಪುಟ್ಟಣ್ಣ ಕಣಗಾಲ್ ವೇದಿಕೆಯಲ್ಲಿ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ವತಿಯಿಂದ “ಅಡ್ವಾನ್ಸ್‍ಡ್ ಟೆಕ್ನಾಲಜಿಸ್ ಫಾರ್ ಪ್ಯೂರಿಫಿಕೇಶನ್ ಆಫ್ ಆರ್ಗಾನಿಕ್ ಕಾಂಪೌಂಡ್” ಎಂಬ ವಿಷಯದ ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Guest lecture (2)
ಒಬ್ಬ ಉತ್ತಮ ರಸಾಯನಶಾಸ್ತ್ರಜ್ಞನಿಗೆ ವೇಗ, ನಿರ್ದಿಷ್ಟತೆ, ಸಂಶೋಧನಾಪರತೆ, ಸರಳತೆ ಮತ್ತು ಪರಿಸರ ಸ್ನೇಹಿ ಮನೋಭಾವ ಅತ್ಯವಶ್ಯಕ. ಹೀಗೆ ಉತ್ತಮ ಕೌಶಲ್ಯವನ್ನು ರೂಢಿಸಿಕೊಂಡ ರಸಾಯನಶಾಸ್ತ್ರ ವಿದ್ಯಾರ್ಥಿಯೇ ಮುಂದೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
“ಅಡ್ವಾನ್ಸ್‍ಡ್ ಟೆಕ್ನಾಲಜಿಸ್ ಫಾರ್ ಪ್ಯೂರಿಫಿಕೇಶನ್ ಆಫ್ ಆರ್ಗಾನಿಕ್ ಕಾಂಪೌಂಡ್” ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು ಸಂಸ್ಕರಣದ ವಿವಿಧ ವಿಧಗಳು ಹಾಗೂ ಕ್ರೊಮೊಟೋಗ್ರಫಿ ವಿಧಾನದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

Guest lecture (1)
ಇದೇ ಸಂದರ್ಭದಲ್ಲಿ ರಸಾಯನಶಾಸ್ತ್ರ ವಿಭಾಗದ ವಾರ್ಷಿಕ ನಿಯತಕಾಲಿಕೆ `ಕೆಮ್-2018′ ಅನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ವಿಭಾಗದ ಮುಖ್ಯಸ್ಥ ಡಾ ಶರತ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ರಸಾಯನಶಾಸ್ತ್ರ ವಿದ್ಯಾರ್ಥಿನಿ ನಿವ್ಯ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *