ಮೂಡುಬಿದಿರೆ: ಇಲ್ಲಿನ ಬೆಳುವಾಯಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಾಸವಾಗಿರುವ, ಪರಿಶಿಷ್ಟ ಜಾತಿಯ ಮೊಗೇರ ಸಮುದಾಯದ ವಸಂತ ಕೆ-ಗೀತಾ ದಂಪತಿಯ ಪುತ್ರ, ಕಾಲೇಜು ವಿದ್ಯಾರ್ಥಿ ಗೌತಮ್ ಕೆ. ಕಳೆದ ಮೂರು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದಾರೆ.
ಗೌತಮ್ ಅವರ ತಾಯಿ ತಂದೆ ಕೂಲಿ ಕಾರ್ಮಿಕರಾಗಿದ್ದು, ಇವರಿಗಿರುವುದು ಪುತ್ರ ಗೌತಮ್ , ಮತ್ತೋರ್ವ ಪುತ್ರಿ. ಗೌತಮ್ ಅವರಿಗೆ ತಾಯಿ ಗೀತಾ ಅವರ ಕಿಡ್ನಿ ಹೊಂದಾಣಿಕೆಯಾಗುವುದಾಗಿ ವೈದ್ಯರು ತಿಳಿಸಿದ್ದು ಗೀತಾ ಕೂಡ ಮಗನಿಗೆ ತನ್ನ ಕಿಡ್ನಿ ನೀಡಲು ಒಪ್ಪಿದ್ದಾರೆ.

ಮೂಡಬಿದಿರೆ ಶ್ರೀ ಧವಲಾ ಕಾಲೇಜಿನಲ್ಲಿ 2017-18ರಲ್ಲಿ ಪ್ರಥಮ ಬಿ.ಕಾಂ. ಓದುತ್ತಿದ್ದ ಗೌತಮ್ ಅವರು ಅನಾರೋಗ್ಯದಿಂದಾಗಿ ವ್ಯಾಸಂಗ ನಿಲ್ಲಿಸುವಂತಾಗಿದೆ. ಗೌತಮ್ ಸದ್ಯ ಮುಂಬೈ ಜಸ್ಲೋಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿನ ವೈದ್ಯರು ಕಿಡ್ನಿ ಜೋಡಣೆಗೆ ಕನಿಷ್ಟ ರೂ. 5 ಲಕ್ಷ ಹಾಗೂ ಕಿಡ್ನಿ ದಾನಿಗೆ ತಗಲುವ ವೆಚ್ಚ ಸುಮಾರು ರೂ. 2 ಲಕ್ಷ, ಕಿಡ್ನಿ ಜೋಡಣೆಗೆ ಮುನ್ನ ತಿಂಗಳಿಗೆ ರೂ. 25,000 ವೆಚ್ಚದಲ್ಲಿ ಡಯಾಲಿಸಿಸ್, ದಾನಿಯ ವೈದ್ಯಕೀಯ ವೆಚ್ಚಕ್ಕಾಗಿ ರೂ. 80,000 ಅಲ್ಲದೆ ಜೋಡಣೆಯ ಬಳಿಕ ಮೊದಲ ವರ್ಷ ಸುಮಾರು ರೂ. 1.5 ಲಕ್ಷದಿಂದ 2 ಲಕ್ಷದವರೆಗೆ ವೆಚ್ಚ ಹೀಗೆ ಸುಮಾರು ರೂ. 10 ಲಕ್ಷಕ್ಕೂ ಅಧಿಕ ವೆಚ್ಚವಾಗಬಹುದೆಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಬಡ ಕೂಲಿ ಕಾರ್ಮಿಕರಾಗಿರುವ ಪೋಷಕರು ಇಷ್ಟನ್ನೆಲ್ಲ ಭರಿಸುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ಸಹೃದಯಿ ದಾನಿಗಳು ಗೀತಾ ಅವರ ಬ್ಯಾಂಕ್ ಖಾತೆಗೆ ದೇಣಿಗೆ ನೀಡಬಹುದಾಗಿದೆ.
ಮನೆ ವಿಳಾಸ: ಗೌತಮ್ ಕೆ., ವಸಂತ ಕೆ. ಅವರ ಪುತ್ರ, ಮನೆ ನಂ.3-163, ಚೈತ್ರ ಗಿರಿ ನಿವಾಸ, ಕೇಂಪುಲು, ಪಡುಮಾರ್ನಾಡು ಗ್ರಾಮ, ಬೆಳುವಾಯಿ, ಮಂಗಳೂರು ತಾ. ದ.ಕ. ಜಿಲ್ಲೆ , 574213.
ಬ್ಯಾಂಕ್ ಖಾತೆ ವಿವರ: ಗೀತಾ , ಬ್ಯಾಂಕ್ ಖಾತೆ ಸಂಖ್ಯೆ : 0645101051244, ಐಎಫ್‍ಎಸ್‍ಸಿ : ಸಿಎನ್‍ಆರ್‍ಬಿ0000645, ಕೆನರಾ ಬ್ಯಾಂಕ್, ಬೆಳುವಾಯಿ .
ಸಂಪರ್ಕ: 9901214662, 9632106567, 9481769513
