ಮೂಡುಬಿದಿರೆ: ರಾಜ್ಯ ಸರ್ಕಾರ ಘೋಷಿಸಿರುವ ಕೃಷಿಕರ ಸಾಲ ಮನ್ನಾ ಯೋಜನೆಯ ಪ್ರಯೋಜನವನ್ನು ವ್ಯವಸಾಯ ಸೇವಾ ಸಹಕಾರಿ ಸಂಘಗಳಲ್ಲಿ ಮಾಡಿರುವ ಬೆಳೆ ಸಾಲ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿರುವ ಕೃಷಿ ಸಾಲ ಮಾಡಿರುವ ರೈತರಿಗೆ ಮಾತ್ರ ನೀಡಲಾಗುತ್ತಿದೆ. ಇದನ್ನು ಈ ಹಿಂದೆ ಭರವಸೆ ನೀಡಿದಂತೆ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್‍ಗಳ ಮೂಲಕ ಕೃಷಿ ಸಾಲ ಪಡೆದಿರುವ ರೈತರಿಗೂ ಅನ್ವಯಿಸಬೇಕು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ದ.ಕ. ಜಿಲ್ಲಾಧಿಕಾರಿಯವರ ಮೂಲಕ ದ.ಕ. ಜಿಲ್ಲೆಯ ವಿವಿಧ ಪಿಎಲ್‍ಡಿ ಬ್ಯಾಂಕ್‍ಗಳ ಪರವಾಗಿ ಬೆಳ್ತಂಗಡಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಪ್ರವೀಣ್‍ಚಂದ್ರ ಅವರು ಮನವಿ ಸಲ್ಲಿಸಿದರು.

Bank Manavi
ದ.ಕ. ಜಿಲ್ಲೆಯ ವಿವಿಧ ತಾಲೂಕುಗಳ ಪಿಎಲ್‍ಡಿ ಬ್ಯಾಂಕುಗಳ ಅಧ್ಯಕ್ಷರಾದ ವಿನಯಕುಮಾರ ಸೂರಿಂಜೆ (ಮಂಗಳೂರು), ಸುದರ್ಶನ ಜೈನ್ (ಬಂಟ್ವಾಳ), ಹರೀಶ್ ಕಂಜಿಪಿಲಿ (ಸುಳ್ಯ), ಮನೋಹರ ರೈ (ಪುತ್ತೂರು) ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *