ಕೈಕಂಬ :ದಕ್ಷಿಣ ಕನ್ನಡ ಜಿಲ್ಲಾ ಮುಖ್ಯೋಪಾಧ್ಯಾಯರ ಮತ್ತು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಮಂಗಳೂರು ಇದರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಡಾ. ಎನ್. ಇಸ್ಮಾಯಿಲ್ ಇವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ ನಡೆಯಿತು. 2018-19ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಅಧ್ಯಕ್ಷರಾಗಿ ಡಾ. ಎನ್. ಇಸ್ಮಾಯಿಲ್ ಅಧ್ಯಕ್ಷರಾಗಿ, ಜಯಶ್ರೀ ಜಿ.ಎಸ್. (ಅನ್ಸಾರ್ ಪ್ರೌಢ ಶಾಲೆ ಬಜ್ಪೆ), ಉಪಾಧ್ಯಕ್ಷರಾಗಿ ಉಮೇಶ್ ಕರ್ಕೆರ (ಶ್ರೀ ನಾರಾಯಣ ಗುರು ಪಿ.ಯು. ಕಾಕೇಜು ಕಾಟಿಪಳ್ಳ) ಕೆ. ಎಂ.ಕೆ. ಮಂಜನಾಡಿ (ಸೈಯದ್ ಮದನಿ ಪ್ರೌಢ ಶಾಲೆ ಉಳ್ಳಾಲ ), ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ಶೆಟ್ಟಿ (ಅವರ್ ಲೇಡಿ ಆಫ್ ಪೊಂಪೈ ಪ್ರೌಢ ಶಾಲೆ ಕೃಕಂಬ),

13vp mahasabe ಜೊತೆ ಕಾರ್ಯದರ್ಶಿಯಾಗಿ ಜಯವಂತಿ ಸೋನ್ಸ್ (ಬಿ.ಎಂ. ಪ್ರೌಢ ಶಾಲೆ ಉಳ್ಳಾಲ), ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಲೋಸಿಯನ್ ಡೀಸೋಜ (ರೊಸಾರಿಯೊ ಪ್ರೌಢ ಶಾಲೆ ಮಂಗಳೂರು), ಶಾಂತಿ ವಿಜಯ್ (ಅಂಜು ಮಾನ್ ಕಾಲೇಜು ಜೋಕಟ್ಟೆ) ಎವರೆಸ್ಟ್ ಕ್ರಾಸ್ತಾ (ಕಾಸ್ಸಿಯಾ ಪ್ರೌಢ ಶಾಲೆ ಮಂಗಳೂರು) ವಿನ್ಸೆಂಟ್ ಡಿ. ಕೋಸ್ತ (ರೋಟಾರಿ ಪ್ರೌಢ ಶಾಲೆ ಮೂಡಬಿದ್ರಿ), ಪ್ರಶಾಂತ್ ಬಿ. (ಆಳ್ವಾಸ್ ಪ್ರೌಢ ಶಾಲೆ ಮೂಡಬಿದ್ರಿ), ಕೆ.ಎನ್. ಗಂಗಾಧರ್ ಆಳ್ವಾ (ತುಂಬೆ ಪಿ.ಯು. ಕಾಲೇಜು ತುಂಬೆ), ರಮಾನಂದ (ಸರ್ಕಾರಿ ಪಿ.ಯು. ಕಾಲೇಜು ಸಿದ್ದಕಟ್ಟೆ), ರಾಮ ಕೃಷ್ಣ ಭಟ್ (ಎಸ್.ಡಿ.ಎಂ. ಪ್ರೌಢ ಶಾಲೆ ಬೆಳಾಲು), ಶಿವರಾಯ ಶಾಸ್ತ್ರಿ (ವಿದ್ಯಾ ಬೋಧಿನಿ ಪ್ರೌಢ ಶಾಲೆ ಬಾಳಿಲ), ಶ್ರೀನಿವಾಸ್ (ಎಸ್.ಜಿ.ಎಮ್. ಪ್ರೌಢ ಶಾಲೆ ಪುತ್ತೂರು) ಆಯ್ಕೆಯಾಗಿದ್ದಾರೆ.

By Suddi9

Leave a Reply

Your email address will not be published. Required fields are marked *