ಬಂಟ್ವಾಳ: ಇಲ್ಲಿನ ಬಿಲ್ಲವ ಸಮಾಜ ಸೇವಾ ಸಂಘ ಇದರ ಮಹಿಳಾ ಸಮಿತಿಯ ವತಿಯಿಂದ ಅಧ್ಯಕ್ಷೆ ಜಯಲಕ್ಷ್ಮಿ ಭುವನೇಶ್ ಅವರ ನೇತೃತ್ವದಲ್ಲಿ ಸಮಿತಿಯ ಸದಸ್ಯರು ಬ್ರಹ್ಮಶ್ರೀ ನಾರಾಯಣ ಗುರು ಸಭಾಂಗಣಕ್ಕೆ ಶುದ್ದ ಕುಡಿಯುವ ನೀರಿನ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು.

pure water purifier
ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಸಭಾಂಗಣದಲ್ಲಿ ಮದುವೆ ಮತ್ತಿತರ ಶುಭಸಮಾರಂಭಗಳು, ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ ಇಂತಹ ಸಂದರ್ಭದಲ್ಲಿ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಶುದ್ದ ಕುಡಿಯುವ ನೀರಿನ ಯಂತ್ರವನ್ನು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಮಹಿಳಾ ಘಟಕ ಕೊಡುಗೆಯಾಗಿ ನೀಡಿದ್ದು ಎಂದು ಶ್ಲಾಘಿಸಿದ್ದರು.
ಈ ಸಂದರ್ಭದಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಪ್ರಮುಖರಾದ ಬಿ. ವಿಶ್ವನಾಥ , ಸಂಜೀವ ಪೂಜಾರಿ, ರಮೇಶ್, ಉಮೇಶ್ ಸುವರ್ಣ, ಗೋಪಾಲ ಸುವರ್ಣ ತುಂಬೆ, ಸತೀಶ್, ಜನಾರ್ದನ ಸಾಲ್ಯಾನ್ ದರಿಬಾಗಿಲು, ಮೋನಪ್ಪ ಮಜಿ ಮಹಿಳಾ ಸಮಿತಿ ಅಧ್ಯಕ್ಷೆ ಜಯಲಕ್ಷ್ಮೀ ಭುವನೇಶ್, ಉಪಾಧ್ಯಕ್ಷೆ ರಮಣಿ ಮೋಹನ್, ಕಾರ್ಯದರ್ಶಿ ಚಂದ್ರಾವತಿ ಕುಶಲ್‍ರಾಜ್, ಜೊತೆ ಕಾರ್ಯದರ್ಶಿ ಅಮಿತಾ ವಿಶ್ವನಾಥ್, ಮಾಜಿ ಅಧ್ಯಕ್ಷೆ ಮಾಲತಿ ಎಸ್. ಪೂಜಾರಿ, ಶುಭಾ ಇಂದಿರೇಶ್, ಜಯಶ್ರೀ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *