ಮೂಡುಬಿದಿರೆ: ಜೆಸಿಐ ಮೂಡುಬಿದಿರೆ ತ್ರಿಭುವನ್ ಆಶ್ರಯದಲ್ಲಿ ನಡೆಯುತ್ತಿರುವ `ಸಾತ್ ಸುರ್’ ಜೇಸಿ ಸಪ್ತಾಹ 2018 ಅಂಗವಾಗಿ ಮೂಡುಬಿದಿರೆಯ ಪ್ರಗತಿ ಟ್ಯುಟೋರಿಯಲ್‍ನ ವಿದ್ಯಾರ್ಥಿಗಳಿಗಾಗಿ `ರೀಚ್ ಔಟ್ ಆಫ್ ಟೀಚ್’ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

JCI Training
ಮೂಡುಬಿದಿರೆ ಪ್ರೆಸ್‍ಕ್ಲಬ್‍ನ ನಿಕಟಪೂರ್ವ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ, ಸಮಾಜದಲ್ಲಿ ಉದ್ಯಮದ ಬಲವರ್ಧನೆಗೊಳಿಸುವ ಹಲವು ಸಂಸ್ಥೆಗಳಿವೆ. ಜೆಸಿಐ ಸಂಸ್ಥೆಯು ಇವೆಲ್ಲದಕ್ಕಿಂತಲೂ ಭಿನ್ನವಾಗಿ ತನ್ನ ಸದಸ್ಯರ ವ್ಯಕ್ತಿತ್ವವನ್ನು ಬೆಳಗಿಸುವ ಶ್ರೇಷ್ಠ ಕೆಲಸ ಮಾಡುತ್ತಿದೆ. ಪ್ರತಿಭೆ, ಸಾಮಥ್ರ್ಯಕ್ಕೆ ಶಕ್ತಿ ತುಂಬುವಂತಹ ಕೆಲಸ ಸಂಸ್ಥೆಯಿಂದ ನಿರಂತರವಾಗಿ ಆಗಲಿ ಎಂದು ಹಾರೈಸಿದರು.
ಮೂಡುಬಿದಿರೆ ಜೆಸಿಐ ಅಧ್ಯಕ್ಷೆ ಸಂಗೀತಾ ಪ್ರಭು ಅಧ್ಯಕ್ಷತೆವಹಿಸಿದರು. ವಲಯ ತರಬೇತುದಾರ ದಿನೇಶ್ ಕಾರ್ಕಳ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪೂರ್ವಾಧ್ಯಕ್ಷರಾದ ಚಂದ್ರಹಾಸ ದೇವಾಡಿಗ, ಸಂತೋಷ್ ಶೆಟ್ಟಿ, ಸದಸ್ಯ ಮಕ್ಬೂಲ್ ಹುಸೇನ್, ಕಾರ್ಯಕ್ರಮದ ಯೋಜನಾ ನಿರ್ದೇಶಕ ವಿಮಲ್ ರಾಜ್, ಪ್ರದೀಪ್, ಗುರುರಾಜ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *