ಮೂಡುಬಿದಿರೆ: ಜೆಸಿಐ ಮೂಡುಬಿದಿರೆ ತ್ರಿಭುವನ್‍ನ `ಸಾತ್ ಸುರ್’ ಜೇಸಿ ಸಪ್ತಾಹದ ಅಂಗವಾಗಿ ಮೂಡುಬಿದಿರೆ ಶ್ರೀಧವಲಾ ಕಾಲೇಜಿನಲ್ಲಿ ಅಂತರ್ ಕ್ಲಬ್ ಶಟ್ಲ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಆಯೋಜಿಸಲಾಯಿತು.
ಜೆಸಿಐ ಮೂಡುಬಿದಿರೆ ಅಧ್ಯಕ್ಷೆ ಸಂಗೀತಾ ಪ್ರಭು ಹಾಗೂ ಜೆಸಿಐ ಮೂಡುಬಿದಿರೆ ಕೋಶಾಧಿಕಾರಿ ಅಬ್ದುಲ್ ಹಮೀದ್ ಪಂದ್ಯಾಟಕ್ಕೆ ಚಾಲನೆ ನೀಡಿದರು.

JC Week-shuttle badminton
ಈ ಸಂದರ್ಭದಲ್ಲಿ ಕಾರ್ಯದರ್ಶಿ ರಾಮಕೃಷ್ಣ, ರಾಷ್ಟ್ರೀಯ ತರಬೇತುದಾರ ಧೀರೇಂದ್ರ ಜೈನ್, ಕಾರ್ಯಕ್ರಮ ಯೋಜನಾ ನಿರ್ದೇಶಕ ಸುಧಾಕರ್, ಶ್ರೀಸಿಂಚನಾ ಸೌಹಾರ್ದ ಸಹಕಾರಿಯ ಅಧ್ಯಕ್ಷ ಮೋಹನ್ ಪ್ರಭು, ಮೂಡುಬಿದಿರೆ ಜೈನ್ ಮಿಲನ್ ಅಧ್ಯಕ್ಷೆ ಶ್ವೇತಾ ಜೈನ್, ಜೇಸಿರೇಟ್ ಪೂರ್ವಾಧ್ಯಕ್ಷೆ ದೀಪಾ ಉಮೇಶ್ ರಾವ್, ಮನೋಜ್ ಉಪಸ್ಥಿತರಿದ್ದರು.

ಶಟ್ಲ್ ಬ್ಯಾಡ್ಮಿಂಟನ್ ಫಲಿತಾಂಶ:
ನಾಲ್ಕು ವಿಭಾಗಗಳಲ್ಲಿ ನಡೆದ ಟೂರ್ನಿಯಲ್ಲಿ ವಿವಿಧ ಕ್ಲಬ್‍ಗಳ 34 ತಂಡಗಳು ಭಾಗವಹಿಸಿದವು.
ವೈಯಕ್ತಿಕ ಪುರುಷರ ವಿಭಾಗದಲ್ಲಿ ಸುಶಾಂತ್-ಪ್ರಥಮ, ವಿಕಾಸ್-ದ್ವಿತೀಯ ಹಾಗೂ ಮಹಿಳಾ ವೈಯಕ್ತಿಕ ವಿಭಾಗದಲ್ಲಿ ರಶ್ಮಿ ಪ್ರವೀಣ್ -ಪ್ರಥಮ, ಪ್ರಮಯಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಪುರುಷರ ಡಬಲ್ಸ್ ವಿಭಾಗದಲ್ಲಿ ಸಾಗರ್, ಸುಶಾಂತ್-ಪ್ರಥಮ, ಶಾನ್, ವಿಕಾಸ್-ದ್ವಿತೀಯ ಸ್ಥಾನ ಹಾಗೂ ಮಹಿಳಾ ಡಬಲ್ಸ್ ವಿಭಾಗದಲ್ಲಿ ರಶ್ಮಿ ಪ್ರವೀಣ್, ಪೂಜಾ ಶೆಟ್ಟಿ-ಪ್ರಥಮ, ಶುಭಲತಾ, ಜ್ಯೋತಿ-ದ್ವಿತೀಯ ಸ್ಥಾನ ಗಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *