ಮೂಡುಬಿದಿರೆ: ಇಲ್ಲಿನ ವಕೀಲರ ಸಂಘದ ವತಿಯಿಂದ ಮೂಡುಬಿದಿರೆ ನ್ಯಾಯಾಲಯದ ಆವರಣ, ಪಶು ವೈದ್ಯಕೀಯ ಆಸ್ಪತ್ರೆ ಹಾಗೂ ನ್ಯಾಯಾಲಯದ ಮುಖ್ಯರಸ್ತೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಇತರ ತ್ಯಾಜ್ಯಗಳನ್ನು ಸಂಗ್ರಹಿಸಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು.

Vakilara sangha Swachatta Andolana
ನ್ಯಾಯಾಲಯದ ಮುಖ್ಯರಸ್ತೆಯಲ್ಲಿ ಮೂಡುಬಿದಿರೆಯ ಶಾಸಕ ಉಮಾನಾಥ್ ಕೋಟ್ಯಾನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ. ಮೋಹನ್ ಆಳ್ವ ಸ್ವಚ್ಛತಾ ಅಭಿಯಾನಕ್ಕೆ ಸಾಥ್ ನೀಡಿದರು.
ಸ್ವಚ್ಛತಾ ಆಂದೋಲನದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಉಪಾಧ್ಯಕ್ಷ ನಾಗೇಶ್ ಶೆಟ್ಟಿ ಡಿ., ಕಾರ್ಯದರ್ಶಿ ಹರೀಶ್ ಪಿ., ಕೋಶಾಧಿಕಾರಿ ಪದ್ಮಪ್ರಪ್ರಸಾದ್, ವಕೀಲರಾದ ಎಂ. ಎಸ್. ಕೋಟ್ಯಾನ್, ಕೆ. ಆರ್. ಪಂಡಿತ್, ಶರತ್ ಡಿ. ಶೆಟ್ಟಿ, ಎಂ. ಎಸ್. ತಂತ್ರಿ, ಎಂ. ಕೆ. ದ್ವಿಜೇಂದ್ರ ಕುಮಾರ್, ಶಾಂತಿ ಪ್ರಸಾದ್ ಹೆಗ್ಡೆ, ಶ್ವೇತಾ ಜೈನ್, ಶಶಿಕಲಾ, ಮನೋಜ್ ಶೆಣೈ, ಮೋಹಿನಿ, ಶ್ವೇತಾ ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಭಾಗವಹಿಸಿದರು.

By suddi9

Leave a Reply

Your email address will not be published. Required fields are marked *