ಮೂಡುಬಿದಿರೆ: ಕನ್ನಡ ನಾಡಿನ ಶ್ರೇಷ್ಠ ಕಲಾವಿದರನ್ನು ಒಗ್ಗೂಡಿಸುವ ಸಲುವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಕಳೆದ 12 ವರ್ಷಗಳಿಂದ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರವನ್ನು ನುಡಿಸಿರಿ ಅಂಗವಾಗಿ ಆಯೋಜಿಸುತ್ತಾ ಬಂದಿದೆ. ಈ ವರ್ಷದ ಶಿಬಿರವನ್ನು ನವಂಬರ್10ರಿಂದ13ರವರೆಗೆ ಆಯೋಜಿಸಲಾಗುವುದು. ‘ಆಳ್ವಾಸ್ ಚಿತ್ರಸಿರಿ 2018’ಎಂಬ ಶೀರ್ಷಿಕೆಯಡಿಯಲ್ಲಿ ನಡೆಯಲಿರುವ ಈ ರಾಜ್ಯಮಟ್ಟದ ಚಿತ್ರಕಲಾಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 25ಹಿರಿಯ, ಕಿರಿಯ ಸಮಕಾಲೀನ ಕಲಾವಿದರನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ. ಭಾಗವಹಿಸುವ ಕಲಾವಿದರು 3*3 ಅಳತೆಯ ಎರಡು ಕಲಾಕೃತಿಗಳನ್ನು ರಚಿಸಬೇಕು. ಆಹ್ವಾನಿತ ಕಲಾವಿದರಿಗೆ ಊಟ, ವಸತಿ, ಪ್ರಯಾಣ ಭತ್ಯೆಗಳೊಂದಿಗೆ 8000 ರೂಪಾಯಿ ಗೌರವಧನವನ್ನು ನೀಡಲಾಗುವುದು. ಇಲ್ಲಿ ಮೂರ್ತಗೊಳ್ಳುವ ಕಲಾಕೃತಿಗಳನ್ನು ನವಂಬರ್ 16ರಿಂದ18ರ ತನಕ ನಡೆಯಲಿರುವ ಆಳ್ವಾಸ್ ನುಡಿಸಿರಿಯ ಸಭಾಂಗಣದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು.

ಆಸಕ್ತ ಚಿತ್ರಕಲಾವಿದರು ತಮ್ಮಇತ್ತೀಚಿನ 2-3 ಕಲಾಕೃತಿಗಳ ಭಾವಚಿತ್ರದ ಜೊತೆಗೆತಮ್ಮ ಸಾಧನೆಯವಿವರಗಳನ್ನು ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡಬಿದಿರೆ-574227ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 08258-261229 ಎಂದು ಆಳ್ವಾಸ್ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
