ವಿಟ್ಲ: ಯುವ ಬ್ರಿಗೇಡ್ ಮತ್ತು ಸೋದರಿ ನಿವೇದಿತ ಪ್ರತಿಷ್ಠಾನ ಇದರ ವತಿಯಿಂದ ಸ್ವಾಮಿ ವಿವೇಕಾನಂದರ ಚಿಕಾಗೊ ಭಾಷಣಕ್ಕೆ 125 ವರ್ಷಗಳು ತುಂಬಿದ ಸವಿ ನೆನಪಿಗಾಗಿ ಹೊರಟಿರುವ ದಿಗ್ವಿಜಯ ರಥ ಯಾತ್ರೆಯು ಸೆ. 27 ರಂದು ಸಂಜೆ 6 ಗಂಟೆಗೆ ವಿಟ್ಲಕ್ಕೆ ಆಗಮಿಸಿತು.
ಕೇರಳ ರಾಜ್ಯದಿಂದ ಆಗಮಿಸಿದ ಈ ರಥ ಯಾತ್ರೆಯನ್ನು ವಿಟ್ಲದ ಕ ರಾ ರ ಸಾ ಸಂಸ್ಥೆ ಬಸ್ ನಿಲ್ದಾಣದ ಬಳಿ ವಿಟ್ಲದ ಸುರಕ್ಷಾ ಆಸ್ಪತ್ರೆಯ ಡಾ| ಗೀತಪ್ರಕಾಶ್ ಇವರ ನೇತೃತ್ವದಲ್ಲಿ ಸ್ವಾಗತಿಸಲಾಯಿತು.

