ಬಂಟ್ವಾಳ: ಇಲ್ಲಿನ ರಿಕ್ಷಾ ಚಾಲಕ ಮಾಲಕ ಸಂಘದ ವತಿಯಿಂದ ದೂಳು ಸಮಸ್ಯೆ ಹಾಗೂ ವಿವಿಧ ಬೇಡಿಕೆಯನ್ನು ಪೂರೈಸಲು ಶಾಸಕ ರಾಜೇಶ್ ನಾಯಕ್ ಅವರಿಗೆ ಮನವಿ ನೀಡಲಾಯಿತು.
ಬಿಸಿರೋಡಿನ ಹಳೆ ಎಲ್.ಐ.ಸಿ.ಯಿಂದ ಪಿಂಟೋ ಕಾಂಪ್ಲೆಕ್ಸ್ ವರೆಗೆ ರಸ್ತೆ ದುರಸ್ತಿ ಪಡಿಸಿ ದೂಳಿನಿಂದ ಜನ ಸಂಚಾರ ಮುಕ್ತಗೊಳಿಸಿ ಹಾಗೂ ಗ್ರಾಮಾಂತರ ಪರವಾನಿಗೆ ಹೊಂದಿದ ರಿಕ್ಷಾದವರು ಬಿಸಿರೋಡಿನ ಲ್ಲಿ ಬಾಡಿಗೆ ಮಾಡದಂತೆ ಕ್ರಮ ಕೈಗೊಳ್ಳಲು ಕೂಡ ಮನವಿ ಮಾಡಿದರು.

ಈಗಾಗಲೇ ಎ.ಎಸ್.ಪಿ.ಹಾಗೂ ಟ್ರಾಫಿಕ್ ಪೋಲೀಸರಿಗೆ ದೂರು ನೀಡಲಾಗಿದೆ ಎಂದು ಅವರು ಇದೇ ಸಂಧರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ರಿಕ್ಷಾ ಚಾಲಕರ ಸಂಘದ ಅದ್ಯಕ್ಷ ವಸಂತ್ ಕುಮಾರ್ ಮಣಿಹಳ್ಳ ಚಾಲಕ ಸಂಘದ ಕಾರ್ಯದರ್ಶಿ ಶೇಖರ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
