ಬಂಟ್ವಾಳ: ಬಡಗಕಜೆಕಾರು ವ್ಯಾಪ್ತಿಯ 94ಸಿ ಹಕ್ಕುಪತ್ರ, ಸಂಧ್ಯಾ ಸುರಕ್ಷಾ, ವಿಧವೆ ವೇತನವನ್ನು ಫಲಾನುಭವಿಗಳಿಗೆ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ವಿತರಿಸಿದರು.
ಬಡಗಕಜೆಕಾರು ಗ್ರಾ.ಪಂ ಅಧ್ಯಕ್ಷರು ವಕ್ರ ಪೂಜಾರಿ ಬಾರ್ದೋಟ್ಟು, ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ತಾ.ಪಂ ಸದಸ್ಯರಾದ ಶ್ರೀಮತಿ ಬೇಬಿ ಕೃಷ್ಣಪ್ಪ, ಹರಿಶ್ಚಂದ್ರ ಪೂಜಾರಿ ಕಜೆಕಾರು, ಬಡಗಕಜೆಕಾರು ಗ್ರಾಮಕರೀಣಿಕರಾದ ನಿಶ್ಮಿತ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಪೂಜಾರಿ ಮತ್ತು ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬಂಟ್ವಾಳ ಕಂದಾಯ ನಿರೀಕ್ಷರಾದ ನವೀನ್ ಸ್ವಾಗತಿಸಿ, ವಾಸು ದೇವಾಡಿಗ ನಿರೂಪಿಸಿದ್ದರು. ಪ್ರಕಾಶ್ ಕರ್ಲ ವಂದಿಸಿದರು.

By suddi9

Leave a Reply

Your email address will not be published. Required fields are marked *