ಮೂಡುಬಿದಿರೆ: ಜೇಸಿಐ ಮೂಡುಬಿದಿರೆ ತ್ರಿಭುವನ್ ಆಶ್ರಯದಲ್ಲಿ ಅಕ್ಟೋಬರ್ 1ರಿಂದ 7ರವರೆಗೆ ‘ಸಾತ್ ಸುರ್’ ಜೇಸಿ ಸಪ್ತಾಹ-2018 ಮೂಡುಬಿದಿರೆಯಲ್ಲಿ ಆಯೋಜಿಸಲಾಗಿದೆ ಎಂದು ಜೇಸಿಐ ಅಧ್ಯಕ್ಷೆ ಸಂಗೀತ ಪ್ರಭು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ.1ರಂದು ಬೆಳಗ್ಗೆ 10ಗಂಟೆಗೆ ಮೂಡುಬಿದಿರೆ ಸಮಾಜಮಂದಿರದಲ್ಲಿ ಜೇಸಿ ಸಪ್ತಾಹವನ್ನು ಶ್ರೀಮಹಾವೀರ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಭಟ್ ಉದ್ಘಾಟಿಸಲಿದ್ದಾರೆ. ಜೇಸಿಐ ವಲಯ 15ರ ವಲಯಾಧ್ಯಕ್ಷ ರಾಕೇಶ್ ಕುಂಜೂರು ಮುಖ್ಯ ಅತಿಥಿಯಾಗಿರುವರು. ಜೇಸಿಐ ಮೂಡುಬಿದಿರೆ ಸ್ಥಾಪಕ ಅಧ್ಯಕ್ಷ ಜಾನ್ ಪಿಂಟೋ, ಸ್ಥಾಪಕ ಸದಸ್ಯ ಪ್ರತಾಪ್ ಕುಮಾರ್ ಪೂರ್ವಾಧ್ಯಕ್ಷರಾದ ಮಹಮ್ಮದಾಲಿ ಅಬ್ಬಾಸ್, ಪೂರ್ವಾಧ್ಯಕ್ಷ ಗೋಪಾಲಕೃಷ್ಣ ಕಾಮತ್, ಜೆಜೆಸಿ ರಾಷ್ಟ್ರೀಯ ಪೂರ್ವ ಸಂಯೋಜಕ ಹಸ್ದುಲ್ಲಾ ಇಸ್ಮಾಯಿಲ್ ಉಪಸ್ಥಿತರಿರುವರು. ಅದೇ ದಿನ 3ರಿಂದ 6 ವರ್ಷದೊಳಗಿನ ಮಕ್ಕಳಿಗೆ `ಪುಟಾಣಿ ರಾಜ ರಾಣಿ’ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಅ.2ರಂದು ಪ್ರಗತಿ ಟ್ಯುಟೋರಿಯಲ್ನಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ `ರೀಚ್ ಔಟ್ ಆಫ್ ಟೀಚ್’ ಪರಿಕಲ್ಪನೆಯಲ್ಲಿ ಮೂಡಿ ಬರಲಿದೆ. ಮೂಡುಬಿದಿರೆ ಪ್ರೆಸ್ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸೀತಾರಾಮ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಲಯ ತರಬೇತುದಾರ ದಿನೇಶ್ ಕಾರ್ಕಳ ಸಂಪನ್ಮೂಲ ವ್ಯಕ್ತಿಯಾಗಿರುವರು. ಜೇಸಿಐ ಪೂರ್ವಾಧ್ಯಕ್ಷರಾದ ಚಂದ್ರಹಾಸ್ ದೇವಾಡಿಗ, ಸಂತೋಷ್ ಶೆಟ್ಟಿ, ಮಕ್ಬೂಲ್ ಹುಸೇನ್ ಉಪಸ್ಥಿತರಿರುವರು. ಎರಡನೇ ದಿನ ಬೆಳಗ್ಗೆ 7ಗಂಟೆಗೆ ಅಂತರ್ ಕ್ಲಬ್ ಶಟ್ಲ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಶ್ರೀಧವಲಾ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಅ.3ರಂದು ಸಮಾಜಮಂದಿರದಲ್ಲಿ ಬೆಳಗ್ಗೆ 10ಗಂಟೆಯಿಂದ 1ಗಂಟೆಯವರೆಗೆ ಮಹಿಳೆಯರಿಗೆ ಫಿಟ್ನೆಸ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. `ಗೈನ್ ಫಾರ್ ದಿ ಲೇಡಿಸ್’ ಹೆಸರಿನ ಕಾರ್ಯಕ್ರಮದಲ್ಲಿ ವಲಯ ಉಪಾಧಯಕ್ಷೆ ಅಕ್ಷತಾ ಗಿರೀಶ್ ಮುಖ್ಯ ಅತಿಥಿಯಾಗಿರುವರು. ಆಳ್ವಾಸ್ ಆಯುರ್ವೇದ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ನಯನಾ ಎಸ್.ಪೈ ಸಂಪನ್ಮೂಲ ವ್ಯಕ್ತಿಯಾಗಿರುವರು. ಪೂರ್ವಾಧ್ಯಕ್ಷರಾದ ಬಲರಾಮ್ ಕೆ.ಎಸ್, ರಶ್ಮಿತಾ ಯುವರಾಜ್ ಜೈನ್, ವಿನಯಚಂದ್ರ, ಸದಸ್ಯರಾದ ಸಿ.ಎಚ್ ಗಫೂರ್, ಉಮೇಶ್ ರಾವ್ ಉಪಸ್ಥಿತರಿರುವರು. ಅ.4ರಂದು `ಎ ಡೇ ವಿತ್ ಗಿಫ್ಟೆಡ್ ಸ್ಟೂಡೆಂಟ್ಸ್’ ಎನ್ನುವ ಕಾರ್ಯಕ್ರಮವನ್ನು ಅರಮನೆಬಾಗಿಲು ಸಮೀಪವಿರುವ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಆಯೋಜಿಸಲಾಗಿದೆ. ವಲಯ 15ರ ರಿಜನ್-ಎಫ್ ವಲಯ ಉಪಾಧ್ಯಕ್ಷ ಪಶುಪತಿ ಶರ್ಮ ಕಾರ್ಯಕ್ರಮ ಉದ್ಘಾಟಿಸಲಿರುವರು. ಪೂರ್ವಾಧ್ಯಕ್ಷ ಅಜಿತ್ ಪ್ರಸಾದ್, ದಿನೇಶ್ ಆನಡ್ಕ, ಫಾರೂಕ್ ಅಲಂಗಾರ್, ರಿಝ್ವಾನ್ ಉಪಸ್ಥಿತರಿರುವರು.
ಅ.5ರಂದು ಸಮಾಜಮಂದಿರದಲ್ಲಿ `ಸ್ಪೀಕ್ ಔಟ್’ ಡಿಗ್ರಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ನಡೆಯಲಿದೆ. ಪೂರ್ವಾಧ್ಯಕ್ಷ ವಿನೋದ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪೂರ್ವಾಧ್ಯಕ್ಷರಾದ ನವೀನ್ ಎಂ.ಹೆಗ್ಡೆ, ಪ್ರಭಾತ್ ಕುಮಾರ್, ನಿತೇಶ್ ಬಲ್ಲಾಳ್ ಉಪಸ್ಥಿತರಿರುವರು. `ಮೂಡುಬಿದಿರೆಯ ಐತಿಹಾಸಿಕ ಸ್ಥಳ’ ಪರಿಕಲ್ಪನೆಯಲ್ಲಿ ಅ.6ರಂದು ಮೂಡುಬಿದಿರೆ ತಾಲೂಕು ಮಟ್ಟದ ಛಾಯಾಚಿತ್ರ ಸ್ಪರ್ಧೆ ಹಾಗೂ ಟಾರೇಸ್ ಗಾರ್ಡನ್ ಮಾಹಿತಿ ಶಿಬಿರ ಜೈನ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದೆ. ಅ.7ರಂದು ಸಾಯಂಕಾಲ 4ಗಂಟೆಗೆ ನೀಡ್ ಟು ಸಲೆಬ್ರೆಟ್ ಪರಿಕಲ್ಪನೆಯಲ್ಲಿ `ಪವರ್ಪಾಯಿಂಟ್ ಗೀತ್ ಗಾತೇ ಚಲ್’ ಕರೋಕೆ ಗಾಯನ ಸ್ಪರ್ಧೆ ನಡೆಯಲಿದೆ. ಉದ್ಯಮಿ ಅಬುಲ್ ಅಲಾ ಸ್ಪರ್ಧೆಯನ್ನು ಉದ್ಘಾಟಿಸಲಿದ್ದು, ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್, ರಾಷ್ಟ್ರೀಯ ತರಬೇತುದಾರ ಧಿರೇಂದ್ರ ಜೈನ್, ಸದಸ್ಯರಾದ ಪುಷ್ಪರಾಜ್ ಜೈನ್, ಮಹಮ್ಮದ್ ಇರ್ಶಾದ್ ಉಪಸ್ಥಿತರಿರುವರು. ಅತಿಥೇಯ ಸಂಸ್ಥೆಯ ಸದಸ್ಯರು ಹಾಗೂ ಲಿಟ್ಲ್ ಫ್ಲವರ್ ಶಾಲೆಯ ವಿದ್ಯಾರ್ಥಿಗಳಿಂದ ವಿಶೇಷ ಸಾಂಸ್ಕøತಿಕ ವೈಭವ, ಕಲಾಶ್ರೀ ಕುಡ್ಲ ತಂಡದಿಂದ ಬಲೆ ತೆಲಿಪಾಲೆ ಹಾಸ್ಯ ಕಾರ್ಯಕ್ರಮ ನಡೆಯಲಿದೆ.
ಬಳಿಕ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ವಲಯ 15ರ ಮ್ಯಾನೇಂಜ್ಮೆಂಟ್ ವಲಯ ನಿರ್ದೇಶಕ ಅಶೋಕ್ ಚೂಂತರ್ ಮುಖ್ಯ ಅತಿಥಿಗಳಾಗಿರುವರು. ಚೌಟರ ಅರಮನೆಯ ಕುಲದೀಪ್ ಎಂ, ಪೂರ್ವಾಧ್ಯಕ್ಷ ಅಭಿಜಿತ್ ಎಂ., ಮಹಮ್ಮದ್ ಆರಿಫ್, ಮಹೇಂದ್ರ ವರ್ಮ ಜೈನ್ ಉಪಸ್ಥಿತರಿರುವರು.
ಸುದ್ದಿಗೋಷ್ಠಿಯಲ್ಲಿ ಜೇಸಿರೇಟ್ ಅಧ್ಯಕ್ಷೆ ಶಾಂತಲಾ ಎಸ್.ಆಚಾರ್ಯ, ರಾಷ್ಟ್ರೀಯ ತರಬೇತುದಾರ ಧೀರೇಂದ್ರ ಜೈನ್, ಜೇಸಿಐ ಘಟಕ ಉಪಾಧ್ಯಕ್ಷ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
