ಮೂಡುಬಿದಿರೆ: ಇತ್ತೀಚಿಗೆ ಮೂಡುಬಿದಿರೆಯಲ್ಲಿ ನಡೆದ 34 ನೇ ಕರ್ನಾಟಕ ರಾಜ್ಯ ಕಿರಿಯರ ಮತ್ತು ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ – 2018 ರಲ್ಲಿ ಮೂಡಬಿದಿರೆ ಶ್ರೀ ಧವಲಾ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಕುಮಾರಿ ಅಮ್ರೀನ್ 20ರ ವಯೋಮಿತಿಯ ಹ್ಯಾಮರ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕದೊಂದಿಗೆ, ಕು. ವನಿತಾ ರಾಥೋಡ್ ಇವರ ಹೆಸರಿನಲ್ಲಿದ್ದ ಹತ್ತು ವರ್ಷಗಳ ಹಿಂದಿನ ದಾಖಲೆ (41.71ಮೀ) ಮುರಿದು ಹೊಸ ಕೂಟ ದಾಖಲೆ (44.76 ಮೀ) ನಿರ್ಮಿಸಿದ್ದಾರೆ.

ಕಳೆದ ಸೆ. 15 ರಂದು ಆಂದ್ರ ಪ್ರದೇಶದ ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವ ವಿದ್ಯಾನಿಲಯ ಕ್ಯಾಂಪಸ್‍ನಲ್ಲಿ ನಡೆದ ದಕ್ಷಿಣ ವಲಯ 30 ನೇ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ – 2018 ರಲ್ಲಿ ಭಾಗವಹಿಸಿ 20 ರ ವಯೋಮಿತಿಯ ಹ್ಯಾಮರ್ ಥ್ರೊ ವಿಭಾಗದಲ್ಲಿ ಅಮ್ರೀನ್ ದ್ವಿತೀಯ ಸ್ಥಾನ ಪಡೆದರು. ಹ್ಯಾರೀಸ್ ಅವರು ಅಮ್ರೀನ್ ಅವರಿಗೆ ತರಬೇತಿ ನೀಡುತ್ತಿದ್ದಾರೆ.
