ಮೂಡುಬಿದಿರೆ: ಮಂಗಳೂರಿನ ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಯೆನಪೋಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮಂಗಳೂರು ವಿ.ವಿ. ಅಂತರ್ ಕಾಲೇಜು ಮಟ್ಟದ ಮಹಿಳೆಯರ ಬಾಸ್ಕೆಟ್‍ಬಾಲ್ ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ನಾಲ್ಕನೇ ಬಾರಿ ಜೊಯ್ಸಿ ಪಾಯಸ್ ಮೆಮೋರಿಯಲ್ ಟ್ರೋಫಿಯನ್ನು ಮತ್ತು ಶಾಶ್ವತ ಫಲಕವನ್ನು ತನ್ನದಾಗಿಸಿಕೊಂಡಿದೆ.

Basketball Champion

ಫೈನಲ್‍ನಲ್ಲಿ ಆಳ್ವಾಸ್ ತಂಡವು ಎನ್.ಎಸ್.ಎ.ಎಮ್. ಪ್ರಥಮ ದರ್ಜೆ ಕಾಲೇಜು ನಿಟ್ಟೆ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು. ಸೆಮಿಫೈನಲ್‍ನಲ್ಲಿ ಆಳ್ವಾಸ್ ಕಾಲೇಜು ತಂಡವು ಮಂಗಳೂರು ಯುನಿವರ್ಸಿಟಿ ಕ್ಯಾಂಪಸ್ ತಂಡವನ್ನು ಮತ್ತು ಎನ್.ಎಸ್.ಎ.ಎಮ್. ಪ್ರಥಮ ದರ್ಜೆ ಕಾಲೇಜು, ನಿಟ್ಟೆ ತಂಡವು ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಕಾಲೇಜು ರೋಶನಿ ನಿಲಯ, ಮಂಗಳೂರು ಮಣಿಸುವುದರೊಂದಿಗೆ ಫೈನಲ್‍ಗೆ ತೇರ್ಗಡೆಗೊಂಡವು. ಆಳ್ವಾಸ್ ತಂಡದ ಸ್ಪರ್ಧಾಳು ಸಂಧ್ಯಾ ಸರ್ವಾಂಗೀಣ ಆಟಗಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡರು. ವಿಜೇತ ತಂಡಕ್ಕೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *