ಬಡಗಬೆಳ್ಳೂರು: ಕೊಳತ್ತಮಜಲು ಪಂಚಗ್ರಾಮ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ 164 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯ ಪ್ರಯುಕ್ತ ಸೆ. 22ರಂದು ಶನಿವಾರ ಏಕಾಹ ಭಜನಾ ಸಂಕೀರ್ತನೆಗೆ ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚಿನಡ್ಕ ಚಾಲನೆ ನೀಡಿದರು .
ಈ ಸಂದರ್ಭದಲ್ಲಿ ಪಂಚಗ್ರಾಮದ ಅಧ್ಯಕ್ಷ ಗಂಗಾಧರ ಜೆ.ಪೂಜಾರಿ ಕೊಪ್ಪಳ , ರಾಜು ಕೋಟ್ಯಾನ್ ಕರಿಯಂಗಳ , ಚಂದ್ರಹಾಸ ಬಡಗಬೆಳ್ಳೂರು, ಜನಾರ್ಧನ ಎಸ್. ಎಸ್, ಯತೀಶ್ ಸಾಣೂರು ಉಪಸ್ಥಿತರಿದ್ದರು. ನಂತರ ಭಜನಾ ಸಂಕೀರ್ತನೆ ಪ್ರಾರಂಭಗೊಂಡಿತು.
