ಬಂಟ್ವಾಳ: ಪಾಣಿಮಂಗಳೂರು ಗೂಡಿನ ಬಳಿ ಎಂಬಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಮಂಗಳೂರು ಯುವ ಕಾಂಗ್ರೆಸ್ ಸಮಿತಿಯು ಖಂಡಿಸಿ ಬಂಧಿತ ಆರೋಪಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ.

IMG-20180921-WA0049
ಮಗುವಿನ ಮುಗ್ಧತೆಯನ್ನು ಬಲಿಕೊಡಲು ಪ್ರಯತ್ನಿಸಿರುವುದು ಸಂಸ್ಕಾರವಂತ ನಾಗರಿಕರು ತಲೆತಗ್ಗಿಸುವಂತಾಗಿದೆ. ಇಂತಹ ಹೇಯ ಕೃತ್ಯ ಖಂಡನಾರ್ಹ ಮಾತ್ರವಲ್ಲದೆ ತಪ್ಪಿತಸ್ಥರಿಗೆ ಶಿಕ್ಷೆಯಾಗಭೇಕು. ಇಂತಹ ಘಟನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ದೇಶದ ಜನ ಭಯ ಭೀತಿಯಾಗಿದ್ದಾರೆ. ಮುಂದಕ್ಕೆ ಇಂತಹ ಘಟನೆ ಮರುಕಳಿಸದಂತೆ ಮಕ್ಕಳ ಪೋಷಕರು ಜಾಗೃತರಾಗಿರುವುದು ಉತ್ತಮ. ಅಕ್ಷಮ್ಯ ಅಪರಾಧಕ್ಕೆ ಸೂಕ್ತ ಶಿಕ್ಷೆಯಾಗುವಂತೆ ಕ್ರಮ ಜರಗಿಸಬೇಕು ಮತ್ತು ಪ್ರಕರಣದ ಬಾಲಕಿಗೆ ಸೂಕ್ತ ನ್ಯಾಯವನ್ನು ಹಾಗೂ ಕುಟುಂಬಕ್ಕೆ ರಕ್ಷಣೆಯನ್ನು ಒದಗಿಸಬೇಕು ಎಂದು ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಪುದು ಗ್ರಾ ಪಂ ಮಾಜಿ ಉಪಾಧ್ಯಕ್ಷರು ಮತ್ತು ಹಾಲಿ ಸದಸ್ಯರಾದ ಹಾಶೀರ್ ಪೇರಿಮಾರ್ ರವರು ಆಗ್ರಹಿಸಿದರು.

By suddi9

Leave a Reply

Your email address will not be published. Required fields are marked *