ಮೂಡುಬಿದಿರೆ: ಯಾವುದೇ ವಾದವನ್ನು ಮಂಡಿಸುವಾಗ ನೈಜತೆಗೆ ಗಮನ ಕೊಡದೇ ಪರ- ವಿರೋಧಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುವುದು ಸೂಕ್ತವಲ್ಲ ಎಂದು ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಾತ್ವಿಕ್ ತಿಳಿಸಿದರು.

Special lecture

ಅವರು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಅಭಿವ್ಯಕ್ತಿ ವಿದ್ಯಾರ್ಥಿ ವೇದಿಕೆಯ ವತಿಯಿಂದ ಆಯೋಜಿಸಿದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಂದು ವಿಷಯದ ಕುರಿತು ಸಂಪೂರ್ಣ ಮಾಹಿತಿ ಇದ್ದಾಗ ಮಾತ್ರ ಒಬ್ಬ ವ್ಯಕ್ತಿ, ಪ್ರಬುದ್ಧತೆಯಿಂದ ವಾದ ಮಂಡಿಸಲು ಸಾಧ್ಯ. ತರ್ಕಬದ್ದ ವಾದದ ಪೂರ್ವಭಾವಿ ತಯಾರಿಯೆ ನಿರಂತರ ಓದು. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ನವಮಾಧ್ಯಮಗಳ ಸಹಾಯದಿಂದಲೂ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು. ಉಚಿತ ಇ-ಪುಸ್ತಕಗಳ ವೆಬ್‍ಸೈಟ್‍ಗಳಾದ ಇ-ಪಬ್, ಗೂಗಲ್ ಇ-ಬುಕ್ ಸ್ಟೋರ್, ಬುಕ್ ಬೂನ್ ಹಾಗೂ ಪ್ರೊಜೆಕ್ಟ್ ಗುಟೆನ್‍ಬರ್ಗಗಳನ್ನು ಉಪಯೋಗಿಸಿ ಕೊಳ್ಳಬಹುದು ಎಂದು ತಿಳಿಸಿದರು.
ಯಾವುದೇ ವಾದವನ್ನು ನಿಜವೆಂದು, ಅಥವಾ ಸುಳ್ಳೆಂದು ನಿರೂಪಿಸಲು ಸಾಧ್ಯ. ಆದರೆ ಈ ಹಂತದಲ್ಲಿ ವಿಷಯದೆಡೆಗಿನ ಜ್ಞಾನ ನಮ್ಮ ವಾದದ ಗಟ್ಟಿತನವನ್ನು ನಿರ್ಧರಿಸುತ್ತದೆ. ಆದರೆ ಪ್ರಸ್ತುತದಲ್ಲಿ ಹೆಚ್ಚಿನ ಜನರು ವಿಷಯದ ಆಳಕ್ಕಿಳಿಯದೆ, ತಮ್ಮ ಆಲೋಚನೆಗಳಿಗನುಗುಣಾವಾಗಿ ವಿಷಯ ಮಂಡನೆ ಮಾಡುತ್ತಿರುವುದು ನಮ್ಮೆಲ್ಲಾ ಸಂಘರ್ಷಗಳಿಗೆ ಕಾರಣವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯ, ಉಪನ್ಯಾಸಕರಾದ ದೇವಿಶ್ರೀ ಶೆಟ್ಟಿ, ಶ್ರೀಗೌರಿ ಜೋಶಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *