ಮೂಡುಬಿದಿರೆ: ಶತಮಾನದ ಹಿನ್ನೆಲೆಯಿರುವ ಮೂಡಬಿದಿರೆ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ದೇವರ ಮೂರ್ತಿಗೆ ಸೂರ್ಯರಶ್ಮಿ 5 ನಿಮಿಷದಷ್ಟು ಕಾಲ ಸ್ಪರ್ಶಿಸಿದ ಘಟನೆ ಸೆ.17ರಂದು ನಡೆದಿದೆ.

Gopalakrishna Temple

ತೀರ್ಥಮಂಟಪದಲ್ಲಿರುವ ಕರು ಸಹಿತ ಗೋಮಾತೆಯ ಮೂರ್ತಿಯ ಕಾಲಿನೆಡೆಯಿಂದ ಸೂರ್ಯರಶ್ಮಿ ಹಾದು ಗರ್ಭಗುಡಿಯಲ್ಲಿರುವ ಗೋಪಾಲಕೃಷ್ಣ ದೇವರ ಬಿಂಬ ಸ್ಪರ್ಶಿಸಿದೆ. ಕನ್ಯಾಸಂಕ್ರಮಣ ಬುಧ ರಾಶಿಗೆ ಸೂರ್ಯನ ಪ್ರವೇಶವಾಗುವ ಸಂಕ್ರಮಣ ಕಾಲವಾಗಿದೆ. ಈ ಹೊತ್ತಿನಲ್ಲೇ ಸೂರ್ಯ ಮತ್ತು ಬುಧ ಸಂಬಂಧಿ ವಿಷ್ಣು ದೇವರ ಸಂಗಮವಾಗಿದ್ದು ಇದೊಂದು ಸೂರ್ಯ-ನಾರಾಯಣರ ಸಂಗಮ ಎಂದು ಪರಿಭಾವಿಸಬಹುದು ಎಂದು ದೇವಳದ ಆಡಳಿತ ಮೊಕ್ತೇಸರ ಗುರುಪ್ರಸಾದ್ ಹೊಳ್ಳ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

By Suddi9

Leave a Reply

Your email address will not be published. Required fields are marked *