ಪುತ್ತೂರು :ದ ಕ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕಣ ಇಲಾಖೆ, ವಿದ್ಯಾಂಗ ಉಪನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ, ದ ಕ ಜಿ ಪಂ ಹಿ ಪ್ರಾ ಕನ್ನಡ ಶಾಲೆ ಬೊಳಂತಿಮೊಗರು ಮತ್ತು ಸರಕಾರಿ ಪ್ರೌಢ ಶಾಲೆ ಬೊಳಂತಿಮೊಗರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಬಾಲಕ ಬಾಲಕಿಯರ ಖೋ ಖೋ ಪಂದ್ಯಾಟದ ಪ್ರೌಢ ಶಾಲಾ ಬಾಲಕರ ವಿಭಾಗದಲ್ಲಿ ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರಥಮ ಮತ್ತು ಮಂಗಳೂರು ಕಪಿತಾನಿಯಾ ದ್ವಿತೀಯ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಸರಕಾರಿ ಪ್ರೌಢ ಶಾಲೆ ಬೊಳಂತಿಮೊಗರು ಪ್ರಥಮ ಮತ್ತು ವಿದ್ಯಾ ಬೋದಿನಿ ಬಾಳಿಲ ಸುಳ್ಯ ದ್ವತೀಯ ಸ್ಥಾನ ಪಡೆಯಿತು.
ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಪುತ್ತೂರು ಹಳೆನೇರಂಕಿ ಶಾಲೆ ಮತ್ತು ಬಂಟ್ವಾಳ ಮೂಡುಪಡುಕೋಡಿ ಸರಕಾರಿ ಶಾಲೆ ದ್ವಿತೀಯ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಬೆಳ್ತಂಗಡಿ ಬಂದಾರು ಸರಕಾರಿ ಶಾಲೆ ಪ್ರಥಮ ಮತ್ತು ಬೊಳಂತಿಮೊಗರು ಸರಕಾರಿ ಶಾಲೆ ದ್ವಿತೀಯ ಸ್ಥಾನ ಪಡೆಯಿತು.
ಬಹುಮಾನ ವಿತರಣಾ ಸಮಾರಂಭವು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ ನಾಯ್ತೊಟ್ಟುರವರ ಅಧ್ಯಕ್ಷತೆಯಲ್ಲಿ ನೆರವೇರಿತು. ಮುಖ್ಯ ಶಿಕ್ಷಕರುಗಳಾದ ಅನಿಲ್ ವಡೆಗೇರಿ ಮತ್ತು ಸಂಜೀವ ಹೆಚ್, ಶಿಕ್ಷಕರುಗಳಾದ ವಿಠಲ ನಾಯಕ್, ಕೇಶವಯ್ಯ, ಮಾಧವ ಕುದ್ರೆತ್ತಾಯ, ಉಮೇಶ್, ಆಂಜನೇಯ ಆಲದಕಟ್ಟೆ ಮತ್ತು ಪ್ರವೀಣ್ ಕುಮಾರ್ ಕೇಪು ಸಾಲಾ ದೈಹಿಕ ಶಿಕ್ಷಕ ಸುರೇಶ್ ಶೆಟ್ಟಿ. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ರಘುನಾಥ, ಸುಂದರ ಗೌಡ ನಾಯ್ತೊಟ್ಟು, ಜಗದೀಶ, ದನಂಜಯ ನಾಯ್ತೊಟ್ಟು, ಇಂದಿರಾ ಅಡ್ಡಾಳಿ, ಜಗದೀಶ್ಚಂದ್ರ ನಾಯ್ತೊಟ್ಟು, ಐಸೋದಾ, ವನಿತಾ ಮಾಮೇಶ್ವರ, ಸುಮಲತಾ ನಾಯ್ತೊಟ್ಟು ಮೊದಲಾದವರು ಉಪಸ್ಥಿತರಿದ್ದರು.
