ಬಂಟ್ವಾಳ: ದೈವಸೈಳ ವಲಯದ ಕುಂಟಾಲಪಲ್ಕೆ ಅಂಗನವಾಡಿ ಕೆಂದ್ರದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಹುಟ್ಟಿದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆ ಹಾಗೂ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷೆ ಗೀತಾ ವಹಿಸಿಕೊಂಡಿದ್ದರು.BTW_SEP19_7B

ದೈವಸ್ಥಳ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾ. ಪುಷ್ಪಲತಾ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ಮೊಸರುಕುಡಿಕೆ ಉತ್ಸವ ಸಮಿತಿ ಕಾರಿಂಜೇಶ್ವರ ಬಳಗ ಇದರ ಅಧ್ಯಕ್ಷ ಶ್ರೀಧರ ಪೂಜಾರಿ ಮುದಿಮರ, ಸದಸ್ಯ ಆನಂದ ಪೂಜಾರಿ ಅಡಂಕಿಲಬೆಟ್ಟು , ಆಶಾಕಾರ್ಯಕರ್ತೆ ರಾಜವತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಯಶೋಧ ಕಾರ್ಯಕ್ರಮ ನಿರೂಪಿಸಿದರು. ಸ್ತ್ರೀಶಕ್ಯ ಸದಸ್ಯೆಯರು ಹಾಗೂ ವಿದ್ಯಾರ್ಥಿಗಳ ಪೋಷಕರು ವಿವಿಧ ಬಗೆಯ ಪೌಷ್ಟಿಕ ಆಹಾರಗಳನ್ನು ತಯಾರಿಸಿ ತಂದಿದ್ದರು. BTW_SEP19_7A

By Suddi9

Leave a Reply

Your email address will not be published. Required fields are marked *