ಮೂಡುಬಿದಿರೆ : ಎಲ್ಲಾ ದಾನಗಳಿಗಿಂತಲೂ ಶ್ರೇಷ್ಠವಾದ ದಾನ ರಕ್ತದಾನ. ಮನುಷ್ಯನಿಗೆ ಗಂಭೀರ ಸಮಸ್ಯೆ ಉಂಟಾದಾಗ ಅಥವಾ ಪ್ರಾಣವನ್ನು ಉಳಿಸುವಲ್ಲಿ ರಕ್ತ ಮಹತ್ತರ ಪಾತ್ರ ವಹಿಸುತ್ತದೆ. ಅದಕ್ಕಾಗಿ ರಕ್ತದಾನ ಮಾಡುವುದರಿಂದ ಇತರರಿಗೆ ಸಹಾಯ ಮಾಡುವ ಜೊತೆಗೆ ನಮ್ಮ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ನೆರವಾಗುತ್ತದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಸಾಂಸ್ಕøತಿಕ ಕಲಾ ವೇದಿಕೆ ಸಂತೆಕಟ್ಟೆ ಅಶ್ವತ್ಥಪುರ, ತೆಂಕಮಿಜಾರು ಗ್ರಾಮ ಪಂಚಾಯತ್, ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಂಗಳೂರಿನ ಕೆ.ಎಂ.ಸಿ ಹಾಸ್ಪಿಟಲ್ನ ಸಹಕಾರದೊಂದಿಗೆ ಅಶ್ವತ್ಥಪುರ ಸಂತೆಕಟ್ಟೆ ವಿವಿದ್ಧೋದ್ದೇಶ ಸಭಾಂಗಣದಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಣ್ಣಿನ ತಜ್ಞ ಡಾ| ಸುಧೀರ್ ಹೆಗ್ಡೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಆರೋಗ್ಯವನ್ನು ತಪಾಸಣೆ ಮಾಡುವುದರಿಂದ ಮುಂದಿನ ದಿನಗಳಲ್ಲಿ ಆರೋಗ್ಯ ಸಂಬಂಧಿತ ಕಾಯಿಲೆಗಳನ್ನು ಗುರುತಿಸಿ ಸೂಕ್ತವಾದ ಚಿಕಿತ್ಸೆಯನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದ ಅವರು ನಾವು ಜೀವಾಂತವಾಗಿರುವಾಗ ರಕ್ತವನ್ನು ಹಾಗೂ ಮರಣ ಹೊಂದಿದ ನಂತರ ಕಣ್ಣನ್ನು ದಾನ ಮಾಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ ಸದಸ್ಯ ಜನಾರ್ದನ ಗೌಡ, ತೆಂಕಮಿಜಾರು ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಗ್ರಾ.ಪಂ ಸದಸ್ಯರಾದ ಮರಿಯಡ್ಕ ರಮೇಶ್ ಶೆಟ್ಟಿ, ಕರುಣಾಕರ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಕ್ಯಾಂಪ್ನ ಮುಖ್ಯಸ್ಥೆ ರಮಿತಾ ಮುಖರ್ಜಿ, ಮಹಾಲಸಾ ಕ್ಲಿನಿಕ್ನ ಡಾ/ ನಾರಾಯಣ ಪೈ, ಸಾಂಸ್ಕøತಿಕ ಕಲಾ ವೇದಿಕೆಯ ಅಧ್ಯಕ್ಷ ಪ್ರೇಮಾನಂದ ಉಪಸ್ಥಿತರಿದ್ದರು.
ಜಿಂ.ಪಂ ಸದಸ್ಯರುಗಳಾದ ಕೆ.ಪಿ ಸುಚರಿತ ಶೆಟ್ಟಿ ಮತ್ತು ಈಶ್ವರ್ ಕಟೀಲ್ ಶಿಬಿರಕ್ಕೆ ಭೇಟಿ ನೀಡಿದರು.
ಕಾರ್ಯಕ್ರಮವನ್ನು ತೆಂಕಮಿಜಾರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ರಾಕೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ಸದಸ್ಯ ಚೈತನ್ಯ ಭಟ್ ವಂದಿಸಿದರು.

