ಮೂಡುಬಿದಿರೆ: ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಈಗಾಗಲೇ 18 ಶಾಖೆಗಳು ಕಾರ್ಯಾಚರಿಸುತ್ತಿದ್ದು, ಎರಡು ಶಾಖೆಗಳು ಸೆ.30ರೊಳಗೆ ಹೊಸದಾಗಿ ಪ್ರಾರಂಭಗೊಳ್ಳಲಿದೆ. ಸದ್ಯದಲ್ಲೇ ಮಂಗಳೂರಿನಲ್ಲಿರುವ ಕೇಂದ್ರ ಕಚೇರಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ ಎಂದು ಸೊಸೈಟಿ ಅಧ್ಯಕ್ಷ ಕೆ. ಜೈರಾಜ್ ಬಿ.ರೈ ತಿಳಿಸಿದರು.
ಸೊಸೈಟಿಯ ಮೂಡುಬಿದಿರೆ ಶಾಖೆಯ ಗ್ರಾಹಕರ ಸಂಪರ್ಕ ಸಭೆಯು ಸೆ.5ರಂದು ಶಾಖಾ ಕಚೇರಿ ಆವರಣದಲ್ಲಿ ನಡೆಯಿತು. ಸೊಸೈಟಿಯಲ್ಲಿ ಸಿಬ್ಬಂದಿಗಳ ಕೊರತೆ ನಿವಾರಣೆಗೆ ಕ್ರಮ ವಹಿಸಲಾಗಿದೆ. 30 ಮಂದಿ ಹೊಸ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಹೇಳಿದರು.
ಸೊಸೈಟಿ ಪ್ರಸಕ್ತ 170 ಕೋಟಿ ರೂಪಾೈ ಠೇವಣಿ ಹೊಂದಿದ್ದು; 138 ಕೋಟಿ ಹೊರಬಾಕಿ ಸಾಲ ಹೊಂದಿದೆ. ಒಟ್ಟಾರೆಯಾಗಿ 310 ಕೋಟಿ ರೂಪಾೈ ವ್ಯವಹಾರ ನಡೆಸುತ್ತಿದೆ ಎಂದು ತಿಳಿಸಿದರು. ಸಮರ್ಪಕ ದಾಖಲಾತಿ ನೀಡಿದಲ್ಲಿ ಎರಡು ದಿನದಲ್ಲಿ ಗ್ರಾಹಕರಿಗೆ ಸಾಲ ನೀಡುತ್ತಿರುವುದಾಗಿ ಹೇಳಿದರು.
ಸೊಸೈಟಿ ನಿರ್ದೇಶಕ ಮೂಡುಬಿದಿರೆ ಶಾಖಾ ಸಲಹಾ ಸಮಿತಿ ಅಧ್ಯಕ್ಷ ವಿಠಲ ಪಿ. ಶೆಟ್ಟಿಯವರು ಸೊಸೈಟಿಯ ಕಾರ್ಯಚಟುವಟಿಕೆಗಳನ್ನು ತಿಳಿಸಿದರು.
ಪ್ರಧಾನ ವ್ಯವಸ್ಥಾಪಕ ಗಣೇಶ್ ಜಿ.ಕೆ., ಶಾಖಾ ವ್ಯವಸ್ಥಾಪಕಿ ಶ್ರೀಮತಿ ನಿರ್ಮಲಾ ಶೆಟ್ಟಿ ಉಪಸ್ಥಿತರಿದ್ದರು.
ಗ್ರಾಹಕರಾದ ಎಂ.ಎಸ್. ಕೃಷ್ಣ, ಪುರಂದರ ದೇವಾಡಿಗ, ಅಬುಬಕ್ಕರ್, ಹಮೀದ್, ಸೌಮ್ಯ ಸುರೇಶ್‍ರನ್ನು ಅಭಿನಂದಿಸಲಾಯಿತು. ಎಂ. ಲಕ್ಷ್ಮಣ ಮಲ್ಯ, ಪುರಂದರ ಆಚಾರ್ಯ, ಪುರಂದರ ದೇವಾಡಿಗ ಅನಿಸಿಕೆ ವ್ಯಕ್ತಪಡಿಸಿದರು.
ಸೊಸೈಟಿ ಸಿಬ್ಬಂದಿ ರಂಜಿತ್ ಶೆಟ್ಟಿ ಪ್ರಾರ್ಥನೆಗೈದರು. ಶಾಖಾ ಮ್ಯಾನೇಜರ್ ನವೀನ್ ಕುಮಾರ್ ಸ್ವಾಗತಿಸಿದರು. ಗಣೇಶ್ ಜಿ.ಕೆ. ಧನ್ಯವಾದವಿತ್ತರು. ನವೀನ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸಲಹಾ ಸಮಿತಿ ಸದಸ್ಯರಾದ ಪ್ರಭಾತ್‍ಚಂದ್ರ ಆಳ್ವ, ಕೆ. ಸುದರ್ಶನ್ ಶೆಟ್ಟಿ, ಫ್ರಾಂಕ್ ಡಿ’ಕೋಸ್ತ, ಬಾಲಕೃಷ್ಣ ಶೆಟ್ಟಿ, ಶ್ರೀಮತಿ ಪ್ರಕಾಶಿನಿ ಹೆಗ್ಡೆ ಉಪಸ್ಥಿತರಿದ್ದರು.

