ಮೂಡುಬಿದಿರೆ: ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಹಾಗೂ ಜೆಡಿಎಸ್ ಮೂಡುಬಿದಿರೆ ಕ್ಷೇತ್ರದ ಜಂಟಿಯಾಗಿ ಮೂಡುಬಿದಿರೆಯಲ್ಲಿ ಬಂದ್ ಪ್ರಯುಕ್ತ ಸೋಮವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯು ಮಾಜಿ ಸಚಿವರಾದ ಕೆ.ಅಭಯಚಂದ್ರ ಜೈನ್, ಕೆ.ಅಮರನಾಥ ಶೆಟ್ಟಿ ನೇತೃತ್ವದಲ್ಲಿ ಮೂಡುಬಿದಿರೆ ಬಸ್‍ನಿಲ್ದಾಣದಿಂದ ಮೂಡುಬಿದಿರೆ ಬಸ್‍ನಿಲ್ದಾಣದವರೆಗೆ ಕಾಲ್ನಡಿಗೆ ಜಾಥದ ಮೂಲಕ ಪೇಟೆಯ ಮುಖ್ಯರಸ್ತೆಯಲ್ಲಿ ಸಾಗಿ ಮೂಡುಬಿದಿರೆ ತಹಸೀಲ್ದಾರ್ ರಶ್ಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ದೇಶದ ಎಲ್ಲ ವರ್ಗದ ಜನರು ದಿನನಿತ್ಯ ಇದನ್ನೇ ಅವಲಂಬಿಸಿರುವುದರಿಂದ ಕಷ್ಟ ಅನುಭವಿಸುವಂತಾಗಿದೆ. ಪ್ರಧಾನಿ ಮೋದಿ ಐಶರಾಮಿ ಜೀವನ ನಡೆಸಿಕೊಂಡು ತೈಲ ಬೆಲೆ ಏರಿಸುವ ಮೂಲಕ ಜನ ಸಾಮಾನ್ಯರ ಬದುಕಿಗೆ ಬರೆ ಎಳೆದಿದ್ದಾರೆ. ಇಂತಹ ನಡೆ ಸಲ್ಲದ್ದು, ತೈಲ ಬೆಲೆ ಇಳಿಸಲು ಕೇಂದ್ರ ಮುಂದಾಗಬೇಕೆಂದು ಕೆ.ಅಭಯಚಂದ್ರ ಜೈನ್ ಒತ್ತಾಯಿಸಿದರು.

